‘ಜನಪ್ರತಿನಿಧಿಗಳು ಕರೆಂಟ್ ಇದ್ದಂಗ, ಮುಟ್ಟಿದ್ರೆ..!’

7

‘ಜನಪ್ರತಿನಿಧಿಗಳು ಕರೆಂಟ್ ಇದ್ದಂಗ, ಮುಟ್ಟಿದ್ರೆ..!’

Published:
Updated:

ರಾಯಚೂರು: ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆಯು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿತ್ತು...

‘ಜಿಲ್ಲೆಯ ಕೆಲವು ಸರ್ಕಾರಿ ವಸತಿ ನಿಲಯಗಳನ್ನು ತೋರಿಸಲು ಜನಪ್ರತಿ ನಿಧಿಗಳನ್ನು ಕರೆದುಕೊಂಡು ಹೋಗುವುದಾಗಿ ಈ ಹಿಂದೆ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ತಿಳಿಸಿದ್ದರು. ಆದರೆ, ಇಲ್ಲಿಯ ತನಕ ಕರೆದು
ಕೊಂಡು ಹೋಗಿಲ್ಲ’ ಎನ್ನುವ ವಿಚಾರವು ಅನುಪಾಲನಾ ವರದಿಯಲ್ಲಿತ್ತು.

ಈ ಕುರಿತು ಅಸಮಾಧಾನ ಹೊರ ಹಾಕಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ, ‘ಜನಪ್ರತಿನಿಧಿಗಳು ಕರೆಂಟ್ ಇದ್ದಂಗ; ಮುಟ್ಟಿದ್ರ ಶಾಕ್ ಹೊಡಿತೈತಿ ಅಂತ ಬಹಳಷ್ಟು ಅಧಿಕಾರಿಗಳು ತಿಳ್ಕೊಂಡಾರ. ಅದಕ್ಕಾಗಿ ಅಪ್ಪಿತಪ್ಪಿ ಜನಪ್ರತಿನಿಧಿಗಳನ್ನು ಮಾತಾಡ್ಸು ಗೋಜಿಗೆ ಅಧಿಕಾರಿಗಳು ಹೋಗೋದಿಲ್ಲ. ಇಷ್ಟು ತಿಂಗಳಾದ್ರೂ ಹಾಸ್ಟೇಲ್ ನೋಡಾಕ ನಮ್ಮನ್ನ ಕರಕೊಂಡ ಹೋಗಿಲ್ಲ’ ಎಂದರು. ಅಧಿಕಾರಿಗಳು ಮುಖಮುಖ ನೋಡಿಕೊಂಡು ಮೌನ ವಹಿಸಿದರು.

ನಾಗರಾಜ ಚಿನಗುಂಡಿ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !