ಕಿರಣ್‌ ಮಜುಂದಾರ್‌ ಶಾ

7

ಕಿರಣ್‌ ಮಜುಂದಾರ್‌ ಶಾ

Published:
Updated:
Deccan Herald

ಇಂದು ಬಯೋಕಾನ್ ಕಂಪನಿಯ ಹೆಸರನ್ನು ಕೇಳದವರು ಅಪರೂಪ. ಈ ಕಂಪನಿಯ ಹಿಂದೆ ಇರುವ ಶಕ್ತಿ ಕಿರಣ್‌ ಮಜುಂದಾರ್‌ ಶಾ. 

ಕಿರಣ್, 1953ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ ಅವರು ನಂತರ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದರು. ಅಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಂದ ಅವರು 1978ರಲ್ಲಿ ಕೇವಲ ₹ 10,000 ಬಂಡವಾಳದೊಂದಿಗೆ ತಮ್ಮ ಮನೆಯಲ್ಲಿಯೇ ಬಯೋಕಾನ್ ಕಂಪನಿಯನ್ನು ಪ್ರಾರಂಭಿಸಿರು. 

ಆ ಸಮಯದಲ್ಲಿ ಭಾರತದಲ್ಲಿ ಉದ್ಯಮಕ್ಷೇತ್ರ ಅಷ್ಟೇನೂ ಅಭಿವೃದ್ಧಿ ಕಂಡಿರಲಿಲ್ಲ. ಅದರಲ್ಲಿಯೂ ಹೆಣ್ಣುಮಗಳೊಬ್ಬಳು ಬಯೋಟೆಕ್ನಾಲಜಿಯನ್ನು ಆಧರಿಸಿದ ಉದ್ಯಮವನ್ನು ನಡೆಸುವುದು ಖಂಡಿತ ಸುಲಭದ ವಿಷಯ ಆಗಿರಲಿಲ್ಲ. ಆ ಕಾಲಕ್ಕೆ ಅಸಹಜ ಅನಿಸುವಂಥ ಈ ಉದ್ಯಮದ ಕಲ್ಪನೆಯನ್ನು ನಂಬಿಕೊಂಡು ಸಾಲವನ್ನು ನೀಡಲು ಯಾವ ಬ್ಯಾಂಕ್‌ ಕೂಡ ಮುಂದೆ ಬರಲಿಲ್ಲ. ಅವರ ಜತೆ ಕೆಲಸ ಮಾಡಲೂ ಯಾರೂ ಬರಲಿಲ್ಲ. ಬಯೋಟೆಕ್ನಾಲಜಿಯನ್ನು ಆಧರಿಸಿದ ಇಂಥ ಹೈ ಟೆಕ್ ಉದ್ಯಮಕ್ಕೆ ನಿರಂತರವಾದ ವಿದ್ಯುತ್, ಶುದ್ಧ ನೀರು, ಸುಸಜ್ಜಿತ ಪ್ರಯೋಗಾಲಯ, ದುಬಾರಿ ಸಂಶೋಧನಾ ಉಪಕರಣಗಳು, ಅತ್ಯಾಧುನಿಕ ವೈಜ್ಞಾನಿಕ ಕೌಶಲಗಳು ಬೇಕಾಗುತ್ತವೆ. ಇವನ್ನು ಹೊಂದಿಸುವುದೂ ಕಿರಣ್ ಅವರ ಎದುರಿಗೆ ಇದ್ದ ಬಹುದೊಡ್ಡ ಸವಾಲಾಗಿತ್ತು. ಆದರೆ ಈ ಸವಾಲಿಗೆ ಅವರು ಧೃತಿಗೆಡಲಿಲ್ಲ. ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು ಅವರು ಬಯೋಫಾರ್ಮಾಸೆಟಿಕಲ್ ಕಂಪನಿಯನ್ನು ಕಟ್ಟಿ ಬೆಳೆಸಿದರು. ಮುಂದೆ ಬಯೋಕಾನ್ ಕಂಪನಿ ಜಗತ್ತಿನ 20 ಅತ್ಯುತ್ಕೃಷ್ಟ ಬಯೋಟೆಕ್ ಸಂಸ್ಥೆಗಳಲ್ಲಿ ಒಂದು ಎಂದು ಗುರ್ತಿಸಿಕೊಂಡಿತು. ಇದು ಕಿರಣ್‌ ಮಜುಂದಾರ್‌ ಶಾ ಅವರ ಶ್ರಮ, ಛಲ, ಪ್ರತಿಭೆಗೆ ಸಿಕ್ಕ ಪ್ರತಿಫಲ. 

ಇಂದು ಕಿರಣ್ ಪದ್ಮಭೂಷಣ ಸೇರಿದಂತೆ ಹಲವು ಅತ್ಯುತ್ಕೃಷ್ಟ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಗೆಯೇ ಮಹಿಳಾ ಶಕ್ತಿಯ ಒಂದು ಒಳ್ಳೆಯ ಮಾದರಿಯಾಗಿಯೂ ನಿಂತಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !