ಮಹಿಳಾ ಉದ್ಯಮಿಗಳ ‘ಯುಗಾದಿ ಮೇಳ’

ಬುಧವಾರ, ಏಪ್ರಿಲ್ 24, 2019
22 °C

ಮಹಿಳಾ ಉದ್ಯಮಿಗಳ ‘ಯುಗಾದಿ ಮೇಳ’

Published:
Updated:
Prajavani

ಲಘು ಉದ್ಯೋಗ ಭಾರತಿ–ಕರ್ನಾಟಕ ಮಹಿಳಾ ಉದ್ಯಮಿಗಳ ವಿಭಾಗ ಮಾರ್ಚ್‌ 29ರಿಂದ 31ರವರೆಗೆ ‘ಯುಗಾದಿ ಮೇಳ’ ಆಯೋಜಿಸಿದೆ.

ಮಹಿಳೆಯರು ತಯಾರಿಸಿದ ಆಹಾರ, ಮಸಾಲೆ ಪದಾರ್ಥ, ಕರಕುಶಲ ವಸ್ತುಗಳು, ಜವಳಿ, ಕೈಮಗ್ಗ ಬಟ್ಟೆಗಳು, ಸಾಂಪ್ರದಾಯಿಕ ಕಲೆ, ಉಡುಗೆ,ಆಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. 

ಮಾರ್ಚ್‌ 29ರಂದು ಬೆಳಿಗ್ಗೆ 10.30ಕ್ಕೆ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಮಹಿಳಾ ಉದ್ಯಮಿಗಳ ಸಂಘಟನೆ ಅವೇಕ್‌ ಮಾಜಿ ಅಧ್ಯಕ್ಷೆ ಪದ್ಮಾ ಶೇಷಾದ್ರಿ ಉದ್ಘಾಟಿಸಲಿದ್ದಾರೆ. ನಾಡಿನ ವಿವಿಧ ಭಾಗಗಳ ಯಶಸ್ವಿ ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ‘ಯಶಸ್ಸಿನ ಮಾರ್ಗ’ ಕುರಿತು ಮಹಿಳಾ ಉದ್ಯಮಿಗಳ ಗುಂಪು ಚರ್ಚೆ ನಡೆಯಲಿದೆ. 

ಮಾಹಿತಿ ಮೇಳ

ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಉದ್ಯಮಿಗಳ ಒಕ್ಕೂಟ(ಕೋವೆ) ಕರ್ನಾಟಕ ಘಟಕ ಮಾರ್ಚ್‌ 23ರಂದು ಲಲಿತ ಅಶೊಕ್‌ ಹೋಟೆಲ್‌ನಲ್ಲಿ ಮಹಿಳಾ ಉದ್ಯಮಿಗಳ ಸಮಾವೇಶ ಹಮ್ಮಿಕೊಂಡಿದೆ. 

ಉದ್ಯಮ ವಲಯದಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ನಾನಾ ಭಾಗದ 250 ಮಹಿಳಾ ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಮಹಿಳಾ ಉದ್ಯಮಿಗಳಿಗಾಗಿ ರೂಪಿಸಲಾಗಿರುವ ಸರ್ಕಾರದ ಯೋಜನೆಗಳು ಮತ್ತು ಹೊಸ ಉದ್ದಿಮೆಗಳ ಸ್ಥಾಪನೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ನೀಡಲು ರಾಜ್ಯ ಸರ್ಕಾರ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆದಿವೆ ಎಂದು ಕೋವೆ ಅಧ್ಯಕ್ಷೆ ಭಾರತಿ ರಾಜೇಶ್‌ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ: 9611570000/ 9945624446 

‘ಕಾರ್ಡ್‌’ ನಿಂದ ಸ್ಪ್ರಿಂಗ್ ಸಮ್ಮರ್‌ ಕಲೆಕ್ಷನ್‌

ಕಾರ್ಡ್‌ ಸಿದ್ಧ ಉಡುಪು ಬ್ರ್ಯಾಂಡ್‌ ಮಹಿಳೆಯರಿಗಾಗಿ ವಿಶೇಷವಾಗಿ ರೂಪಿಸಿದ ಬೇಸಿಗೆ ಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬ್ಲಾಕ್‌ ಪ್ರಿಂಟ್ಸ್‌, ಹ್ಯಾಂಡ್‌ ಎಂಬ್ರಾಯ್ಡರಿ, ಸ್ಮಾಕಿಂಗ್‌ ವಿನ್ಯಾಸದ ಬೇಸಿಗೆ ಧಿರಿಸುಗಳು ಆರಾಮದಾಯಕ ಮತ್ತು ಆಕರ್ಷಕವಾಗಿವೆ.  

ಇನ್‌ಸ್ಟಾಗ್ರಾಂ ಲಿಂಕ್‌: 
http://www.instagram.com/cord.in/

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !