‘ಆಪರೇಷನ್‌ ಕಮಲ’ ಅಂದ್ರೇ ಕುರಿ ವ್ಯಾಪಾರವೇನ್ರೀ..?

7
ಅನೈತಿಕ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದು ಬಿಜೆಪಿಯ ಯಡಿಯೂರಪ್ಪ; ಸಿದ್ದರಾಮಯ್ಯ ಆಕ್ರೋಶ

‘ಆಪರೇಷನ್‌ ಕಮಲ’ ಅಂದ್ರೇ ಕುರಿ ವ್ಯಾಪಾರವೇನ್ರೀ..?

Published:
Updated:

ಆಲಮಟ್ಟಿ (ವಿಜಯಪುರ):  ‘ಆಪರೇಷನ್‌ ಕಮಲ ಅಂದ್ರೇ ಏನ್ರೀ ? ದುಡ್ಡು ಕೊಟ್ಟು ಕುರಿ, ದನ, ಎಮ್ಮೆ ಖರೀದಿಸಿದಂತೆ, ₨ 20–25 ಕೋಟಿ ಕೊಟ್ಟು ಶಾಸಕರನ್ನು ಖರೀದಿಸುವುದಾ ?’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಕರ್ತರನ್ನೇ ಪ್ರಶ್ನಿಸಿದರು.

‘ಬಿಜೆಪಿಯ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ನೀವು ಬರಬೇಡ್ರೀ. ಅಲ್ಲಿಯೇ ಇರಿ ಎಂದು ನಾನೇ ಹೇಳಿರುವೆ’ ಎಂದು ಶುಕ್ರವಾರ ಆಲಮಟ್ಟಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ರಾಜ್ಯದಲ್ಲಿ ಅನೈತಿಕ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದು ಬಿಜೆಪಿ. ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಿದ್ದ ಸಂದರ್ಭ ಎಂಟು ಶಾಸಕರಿಂದ ರಾಜೀನಾಮೆ ಕೊಡಿಸಿ, ಮತ್ತೆ ಚುನಾವಣೆ ನಡೆಸಿತು. ಇದು ಸರಿಯೋ, ತಪ್ಪೋ ನೀವೇ ಹೇಳಿ’ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಪ್ರಶ್ನಿಸಿದರು.

‘ರಾಜ್ಯದ ಜನರು ಸಮ್ಮಿಶ್ರ ಸರ್ಕಾರದ ಆಡಳಿತ ನಡೆಯಲಿ ಎಂದು ಮತ ನೀಡಿದ್ದಾರೆ. ಅದರಂತೆ ಸರ್ಕಾರ ರಚನೆಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ದಕ್ಷಿಣ, ಉತ್ತರ, ಕರಾವಳಿ ಕರ್ನಾಟಕ ಎಂಬುದಿಲ್ಲ. ಇರುವುದೊಂದೇ ಕರ್ನಾಟಕ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !