ಡಿಪಿಆರ್‌ ಪರಿಷ್ಕರಿಸಲು ನಡೆದಿದೆ ತಯಾರಿ

7
ಹೆಬ್ಬಾಳ–ಬಸವೇಶ್ವರ ವೃತ್ತ ನಡುವೆ ಮೇಲ್ಸೇತುವೆ ನಿರ್ಮಾಣ ವಿವಾದ

ಡಿಪಿಆರ್‌ ಪರಿಷ್ಕರಿಸಲು ನಡೆದಿದೆ ತಯಾರಿ

Published:
Updated:

ಬೆಂಗಳೂರು: ಬಸವೇಶ್ವರ ವೃತ್ತ– ಹೆಬ್ಬಾಳ ನಡುವೆ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಯೋಜನೆಗೆ ಈ ಹಿಂದೆ ತಯಾರಿಸಿದ್ದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಪರಿಷ್ಕರಿಸಲು ಸಿದ್ಧತೆ ನಡೆಸಿದೆ.

’ಇಲ್ಲಿ ಉಕ್ಕಿನ ಸೇತುವೆ ಬದಲು ಎತ್ತರಿಸಿದ ರಸ್ತೆ ನಿರ್ಮಿಸುವ ಚಿಂತನೆ ಇದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜನಾ ವರದಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಂಡು ಯೋಜನೆ ಸಿದ್ಧಪಡಿಸುತ್ತಿದೆ.

‘ಯೋಜನೆಯಲ್ಲಿ ಮಹತ್ತರ ಬದಲಾವಣೆಗಳೇನೂ ಇರುವುದಿಲ್ಲ. ಡಿಪಿಆರ್‌ ಇನ್ನಷ್ಟೇ ಪರಿಷ್ಕರಿಸಬೇಕಿದೆ. ಹಾಗಾಗಿ ಈಗಲೇ ಏನೂ ಹೇಳಲಾಗದು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

***
‘ನಗರವನ್ನು ಬಲಿ ಕೊಡಬೇಡಿ’
ಉಕ್ಕಿನ ಸೇತುವೆ ನಿರ್ಮಾಣದಿಂದ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯುವುದಿಲ್ಲ. ಪರಿಸರ ಮಾಲಿನ್ಯದ ಜೊತೆಗೆ ಶಬ್ದ ಮಾಲಿನ್ಯ ಹೆಚ್ಚುತ್ತದೆ. ನಿರ್ವಹಣೆಯೂ ಕಷ್ಟ. ಮರಗಳನ್ನು ಕಡಿದು ಬೆಂಗಳೂರನ್ನು ಬಲಿ ಕೊಡಬೇಡಿ. ಬದಲಿಗೆ ತಜ್ಞರ ಸಲಹೆಯಂತೆ ಸಮೂಹ ಸಾರಿಗೆಗೆ ಒತ್ತು ಕೊಟ್ಟು, ಮೆಟ್ರೊ ವಿಸ್ತರಣೆ ಮಾಡಿ.
–ಕೆ.ಸಿ.ರತ್ನಶ್ರೀ ಶ್ರೀಧರ್, ಚಿಕ್ಕಲ್ಲಸಂದ್ರ

*
‘ತಾಪಮಾನದಲ್ಲಿ ವ್ಯತ್ಯಾಸವಾಗಲಿದೆ’
ಸೇತುವೆ ನಿರ್ಮಾಣವಾದರೆ ಅದರಿಂದ ಶಾಖ ಪ್ರತಿಫಲನಗೊಂಡು ಸ್ಥಳೀಯ ತಾಪಮಾನದಲ್ಲಿ ವ್ಯತ್ಯಾಸವಾಗಲಿದೆ. ಆ ಪ್ರದೇಶದಲ್ಲಿ ಸಂಚರಿಸುವ ಪ್ರವಾಸಿಗರ ಮೇಲೂ ಪರಿಣಾಮ ಬೀರಲಿದೆ. 
–ಎಂ.ಕೆ.ಪ್ರೀಜು, ಜರಗನಹಳ್ಳಿ

*
‘ದೇಶದ ಮುನ್ನಡೆಯ ಸೂಚ್ಯಂಕ’
ಪರಿಸರವನ್ನು ಕಾಪಾಡಿಕೊಂಡು ಸೇತುವೆ ನಿರ್ಮಾಣ ಮಾಡಿದರೆ ಮುಂದಿನ ಪೀಳಿಗೆಗೆ ಬಹಳ ಉಪಯೋಗವಾಗುತ್ತದೆ. ಇಂಥ ಅಭಿವೃದ್ಧಿ ಬೆಳವಣಿಗೆಗಳು ದೇಶದ ಮುನ್ನಡೆಯ ಸೂಚ್ಯಂಕವಾಗಿರುತ್ತವೆ.
–ಸಿ.ಶಾಂತಕುಮಾರ್, ಸಂಪಂಗಿರಾಮನಗರ

*
‘ತಜ್ಞರೊಂದಿಗೆ ಚರ್ಚಿಸಿ’
ಸಂಚಾರ ದಟ್ಟಣೆ ನಿವಾರಣೆಗೆ ಬಹುಕೋಟಿ ವೆಚ್ಚದ ಉಕ್ಕಿನ ಸೇತುವೆ ಯೋಜನೆ ಪರಿಹಾರವಲ್ಲ. ಇದರ ಬದಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಸರ್ಕಾರ ಸಂಬಂಧಿಸಿದ ತಜ್ಞರು, ಸಾರ್ವಜನಿಕರೊಂದಿಗೆ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯಕ್ಕೆ ಬರುವುದು ಒಳಿತು.
–ಕೆ.ಜೆ.ಹಳ್ಳಿ ಸುರೇಶ್‌, ಬನಶಂಕರಿ

*
‘ಇತರ ಕೆಲಸಗಳ ಕಡೆ ಗಮನಹರಿಸಿ’
ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮರಗಳನ್ನು ಕಡಿಯಲಾಗುತ್ತದೆ. ಮುಂದಿನ ಪೀಳಿಗೆಯವರಿಗೆ ಭಾವಚಿತ್ರಗಳಲ್ಲಿ ಮರಗಳನ್ನು ತೋರಿಸಬೇಕಾಗುತ್ತದೆ. ಸೇತುವೆ ನಿರ್ಮಿಸಿ ಶ್ರೀಮಂತರನ್ನು ಉದ್ಧರಿಸುವ ಬದಲು, ಇತರೆ ಕಾರ್ಯಗಳತ್ತ ಗಮನಹರಿಸಿ.
–ಪ್ರಿಯಾಂಕಾ ಸಂಜಯ್‌, ಯಲಹಂಕ

*
‘ಸೇತುವೆ ನಿರ್ಮಾಣ ಬೇಡ’
ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಕೆರೆಗಳು ತೀವ್ರವಾಗಿ ಮಲೀನಗೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ.
–ರಾಮಕೃಷ್ಣ, ಸಿಐಎಲ್ ಬಡಾವಣೆ

*
‘ತೆರಿಗೆ ಹಣದ ಅಅ‍ಪವ್ಯಯ’
ಉಕ್ಕಿನ ಸೇತುವೆ ಜನಸಾಮಾನ್ಯರಿಗೆ ಬೇಕಿಲ್ಲ. ಪರಿಸರಕ್ಕೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಉಕ್ಕಿನ ಸೇತುವೆ ನಿರ್ಮಾಣ ತೆರಿಗೆ ಹಣದ ಅಪವ್ಯಯವಷ್ಟೆ.
–ಅಜಯ್‌ ಕುಮಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !