ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಏನಂತಾರೆ?

7

ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಏನಂತಾರೆ?

Published:
Updated:
Deccan Herald

ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಹೇಳಿರುವ ಅಭಿಪ್ರಾಯಗಳು ಇಲ್ಲಿವೆ.

ಇನ್ನಷ್ಟು ಓದುಗರನ್ನು ಸೆಳೆಯಲಿ

ವಿಶಿಷ್ಟ ಸುದ್ದಿ ಮತ್ತು ಲೇಖನಗಳ ಮೂಲಕ ರಾಜ್ಯದ ಓದುಗರ ಮನಸೆಳೆದಿರುವ ‘ಪ್ರಜಾವಾಣಿ’ ವರ್ಣಮಯವಾಗಿ ಮೂಡಿ ಬರುತ್ತಿರುವುದು ಸಂತಸದ ಸಂಗತಿ. ಕನ್ನಡಿಗರ ಪ್ರೀತಿಗೆ ಪಾತ್ರವಾಗಿರುವ ಪತ್ರಿಕೆಯು ತನ್ನ ಬಣ್ಣದ ಪುಟಗಳ ಆಕರ್ಷಣೆಯಿಂದ ಇನ್ನಷ್ಟು ಓದುಗರನ್ನು ತನ್ನತ್ತ ಸೆಳೆಯಲಿ.

–ವಿ. ಏಡುಕುಂಡಲು, ಡಿಸಿಎಫ್‌, ಮಲೆಮಹದೇಶ್ವರ ವನ್ಯಧಾಮ.

ಓದುಗರಿಗೆ ಅನುಕೂಲ 

10 ವರ್ಷಗಳಿಂದಲೂ ಪತ್ರಿಕೆ ಓದುಗನಾಗಿದ್ದೇನೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಈ ಪತ್ರಿಕೆಯ ಪಾತ್ರ ಅಮೋಘವಾದುದು. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಸುವವರಿಗೆ ‘ಪ್ರಜಾವಾಣಿ’ ಅತ್ಯಂತ ಉಪಯುಕ್ತ ಮಾಹಿತಿ ನೀಡುವ ಪತ್ರಿಕೆ. ಇದೀಗ ಪ್ರತಿ ಪುಟವೂ ವರ್ಣಮಯವಾಗಿ ಮೂಡಿ ಬರುತ್ತಿರುವುದರಿಂದ ಓದುಗರಿಗೆ ಇನ್ನಷ್ಟು ಅನುಕೂಲವಾಗಲಿದೆ.

– ಜೆ. ಶಿವರಾಜು, ಹನೂರು

ವಿನೂತನವಾಗಿದೆ  

‘ಹೊಸತನಕ್ಕೆ ಒಗ್ಗಿಕೊಳ್ಳುವ ದಿಸೆಯಲ್ಲಿ ಬಣ್ಣವಾಗಿರುವ ‘ಪ್ರಜಾವಾಣಿ’ ನನ್ನ ಅಚ್ಚುಮೆಚ್ಚಿನ ಪತ್ರಿಕೆ. ಗುಣಮಟ್ಟದ ಸುದ್ದಿಗಳಿಗೆ, ಅಕ್ಷರ ಜೋಡಣೆಗೆ ಇದನ್ನು ಓದುತ್ತೇನೆ. ಕನ್ನಡ ಪದಗಳ ಗ್ರಹಿಕೆಗೆ ಇದು ಸಹಕಾರಿಯಾಗಿದೆ. ಬಣ್ಣದ ರೂಪದಲ್ಲಿ ಹೊರ ಬಂದಿರುವ ಪತ್ರಿಕೆ ಇದೇ ಹಾದಿಯಲ್ಲಿ ಸಾಗಲಿ

–ಸಿ.ಆರ್.ಹರೀಶ್‌ ಆರಾಧ್ಯ, ಮುಖ್ಯ ಶಿಕ್ಷಕ, ಚಾಮರಾಜನಗರ

ಅತ್ಯಾಕರ್ಷಕ

‘ಪ್ರಜಾವಾಣಿ’ಯ ವರ್ಣಮಯವಾದ ಪುಟಗಳು ಓದುಗರ ಕಣ್ಣಿಗೆ ಅತ್ಯಾಕರ್ಷಕವಾಗಿವೆ. ಪ್ರತಿಯೊಂದು ಪುಟವನ್ನು ಮತ್ತೆ ಮತ್ತೇ ಓದಬೇಕು ಮತ್ತು ನೋಡಬೇಕು ಎನಿಸುತ್ತದೆ. ಆರೋಗ್ಯಕರವಾದ ಸಮಾಜಕ್ಕೆ ಬೇಕಾದ ಉತ್ತಮ ಲೇಖನಗಳು ಹಾಗೂ ವಿಷಯಗಳು ಹೆಚ್ಚು ಬರುತ್ತಿರುವುದರಿಂದ ಜನ ಮೆಚ್ಚುಗೆಯ ಪತ್ರಿಕೆಯಾಗಿದೆ. ಇದು ಹೀಗೆ ಮುಂದುವರೆಯಲಿ.

–ಸುರೇಶ ಆರ್, ಕಂದೇಗಾಲ, ಗುಂಡ್ಲುಪೇಟೆ ತಾಲ್ಲೂಕು

ಸಂತೋಷದ ವಿಚಾರ

‘ಪ್ರಜಾವಾಣಿ’ಯು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ನೈಜ್ಯ ಸುದ್ದಿಗಳ ಸತ್ಯತೆಯನ್ನು ಹೊಂದಿದ್ದು ಅನ್ಯಾಯಕ್ಕೆ ಒಳಗಾಗಿರುವ ಜನರಿಗೆ ನ್ಯಾಯವನ್ನು ದೊರಕಿಸಿಕೊಡುವ ಪತ್ರಿಕೆ ನಮ್ಮದು. ಎಲ್ಲ ಪುಟಗಳು ಕಲರ್ ಬರುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ.

–ಶಶಿಕುಮಾರ್, ಕೊಳ್ಳೇಗಾಲ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !