ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರ ಏನಂತಾರೆ?

7

ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರ ಏನಂತಾರೆ?

Published:
Updated:
Deccan Herald

ಚಾಮರಾಜನಗರ: ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಹೇಳಿರುವ ಅಭಿಪ್ರಾಯಗಳು ಇಲ್ಲಿವೆ.

ಬಣ್ಣದ ಲೇಪನ ಸುಂದರವಾಗಿದೆ

‘ಪ್ರಜಾವಾಣಿ’ ಪತ್ರಿಕೆ ಗುಣಮಟ್ಟದಲ್ಲಿ ಚೆನ್ನಾಗಿದೆ. ಸುದ್ದಿ ವಿಚಾರದಲ್ಲೂ ಯಾವುದೇ ರಾಜಿ ಇಲ್ಲ. ಈಗ ಎಲ್ಲ ಪುಟಗಳು ಬಣ್ಣದ ರೂಪದಲ್ಲಿ ಹೊರ ಬಂದಿರುವುದು ಸಂತಸ ತಂದಿದೆ. ಬಣ್ಣದ ಚಿತ್ರಗಳು ಆಕರ್ಷಣೀಯವಾಗಿವೆ.

–ಎಸ್‌.ನಿರಂಜನ್‌ ಕುಮಾರ್, ಚಾಮರಾಜನಗರ

ಆಕರ್ಷಕವಾಗಿದೆ

‘ಪ್ರಜಾವಾಣಿ’ ಪತ್ರಿಕೆ ಓದುವುದು ನನಗೆ ಅಭ್ಯಾಸವಾಗಿದೆ. ಪತ್ರಿಕೆಯು ಹೊಸ ವಿಷಯಗಳನ್ನು ಓದುಗರಿಗೆ ನೀಡುತ್ತಿದೆ. ನೊಂದವರ ಪಾಲಿಗೆ ಸದಾ ಧ್ವನಿಯಾಗುತ್ತದೆ. ಇತ್ತೀಚೆಗೆ ವಿವಿಧ ಬಣ್ಣಗಳಲ್ಲಿ ಮೂಡಿಬರುತ್ತಿರುವುದು ಹೆಚ್ಚು ಆಕರ್ಷಕವಾಗಿದೆ

–ಶಿವ, ಮೇಲುಕಾಮನಹಳ್ಳಿ

ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ

ರಾಜ್ಯದಲ್ಲಿ ಇಂದಿಗೂ ಹೆಚ್ಚು ಪ್ರಚಲಿತದಲ್ಲಿರುವ ಅಪ್ಪಟ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’ ಎಂದರೆ ತಪ್ಪಾಗಲಾರದು. ಹಿಂದಿನಿಂದಲೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಏಕೈಕ ಪತ್ರಿಕೆ. ಇಂದು ಬಣ್ಣದ ಪುಟಗಳನ್ನು ಒಳಗೊಂಡ ಪತ್ರಿಕೆಯಾಗಿರುವುದು ಖುಷಿ ತಂದಿದೆ.

–ಜಿ. ಗಿರೀಶ್‌, ಮಹದೇಶ್ವರ ಬೆಟ್ಟ

ಇನ್ನೂ ಅನುಕೂಲ

‘ಪ್ರಜಾವಾಣಿ’ಯು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದರ್ಶ ಪತ್ರಿಕೆಯಾಗಿದೆ. ಸಾರ್ವಜನಿಕರ ಮತ್ತು ಸಮಾಜದ ಅನುಕೂಲಕ್ಕಾಗಿ ಉತ್ತಮ ಸುದ್ದಿಗಳನ್ನು ಜನರಿಗೆ ನೀಡುತ್ತಾ ಬಂದಿದೆ. ಅದರಲ್ಲೂ ವರ್ಣಮಯ ಆಗಿರುವುದರಿಂದ ಓದುಗರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.

–ಡಿ.ಸಿದ್ದರಾಜು, ವಕೀಲ, ಪಾಳ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !