ಸಕಾಲದಿಂದ 18 ಸೇವೆಗಳಿಗೆ ಕೊಕ್‌?: ಸರ್ಕಾರಿ ನೌಕರರ ವಿರೋಧ

7

ಸಕಾಲದಿಂದ 18 ಸೇವೆಗಳಿಗೆ ಕೊಕ್‌?: ಸರ್ಕಾರಿ ನೌಕರರ ವಿರೋಧ

Published:
Updated:

ಬೆಂಗಳೂರು: ಸರ್ಕಾರಿ ನೌಕರರ ಸೇವಾ ವಿಷಯಗಳಿಗೆ ಸಂಬಂಧಿಸಿದ 18 ಸೇವೆಗಳನ್ನು ಸಕಾಲ ಯೋಜನೆ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾವಕ್ಕೆ ಸರ್ಕಾರಿ ನೌಕರರ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಸರ್ಕಾರಿ ನೌಕರರ ಸಂಘಟನೆಗಳ ಜೊತೆ ಇತ್ತೀಚೆಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು.

‘ಸಂಬಳ ವಿತರಣೆ, ಕಾಲಮಿತಿ ವೇತನ ಬಡ್ತಿ, ಹಿರಿಯ ವೇತನ ಶ್ರೇಣಿ, ವಾರ್ಷಿಕ ಬಡ್ತಿ, ಗಳಿಕೆ ರಜೆ, ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ ಸೇರಿದಂತೆ ಒಟ್ಟು 18 ಸೇವೆಗಳನ್ನು ಸಕಾಲ ವ್ಯಾಪ್ತಿಯಿಂದ ಹೊರಗಿಡಲಾಗುತ್ತಿದೆ. ಇದರಿಂದ ನೌಕರರ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತದೆ’ ಎಂದು ರಾಜ್ಯ ನೂತನ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಒಳಪಡುವ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಜಿ. ಸಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !