ಫೈನಾನ್ಷಿಯಲ್‌ ಅಕೌಂಟಿಂಗ್‌ನ ಅವಕಾಶಗಳೇನು?

7

ಫೈನಾನ್ಷಿಯಲ್‌ ಅಕೌಂಟಿಂಗ್‌ನ ಅವಕಾಶಗಳೇನು?

Published:
Updated:
ಫೈನಾನ್ಷಿಯಲ್‌ ಅಕೌಂಟಿಂಗ್‌

1. ನಾನು ಬಿ.ಕಾಂ. ಮುಗಿಸಿದ್ದೇನೆ, ಮುಂದೆ ಫೈನಾನ್ಷಿಯಲ್‌ ಅಕೌಂಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕು ಎಂದುಕೊಂಡಿದ್ದೇನೆ. ನನಗೆ ಒಳ್ಳೆಯ ಕಾಲೇಜುಗಳ ಮಾಹಿತಿ ನೀಡಿ; ಈ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆಯೂ ತಿಳಿಸಿ.

-ಪೃಥ್ವಿ, ಊರು ಬೇಡ

ಫೈನಾನ್ಷಿಯಲ್‌ ಅಕೌಂಟಿಂಗ್ ದೊಡ್ಡ ಬ್ಯುಸಿನೆಸ್‌ಗಳಲ್ಲಿ ನಡೆಯುವ ವ್ಯವಹಾರಗಳ ಸಂಕ್ಷಿಪ್ತ ವಿವರಣೆ, ಅನಾಲಿಸಿಸ್‌, ರಿಪೋರ್ಟ್ ನೀಡುವ ಕ್ಷೇತ್ರ. ಇದು ಸ್ಟಾಕ್ ಹೋಲ್ಡರ್‌ಗಳಿಗೆ, ಬ್ಯಾಂಕ್, ಸರ್ಕಾರಿ ಏಜೆನ್ಸಿಗಳಿಗೆ, ಸ್ಟೇಕ್ ಹೋಲ್ಡರ್‌ಗಳಿಗೆ ಬಹಳ ಮುಖ್ಯ. ಇದರ ಆಧಾರದ ಮೇಲೆ ಅವರು ತಮ್ಮ ಇನ್ವೆಸ್ಟ್‌ಮೆಂಟ್ ಅನ್ನು ನಿರ್ಧರಿಸುತ್ತಾರೆ.

ಈ ಕೋರ್ಸ್ ಮಾಡಲು ಇಚ್ಛಿಸುವವರು ಲೆಕ್ಕದಲ್ಲಿ ಆಸಕ್ತಿ ಹಾಗೂ ಪರಿಣತಿ ಇರುವವರಾಗಿರಬೇಕು. ರಿಸನಿಂಗ್ ಎಬಿಲಿಟಿ, ಕಂಪ್ಯೂಟರ್ ಜ್ಞಾನ ಇರಬೇಕು.

ಬೆಂಗಳೂರು ವಿಶ್ವವಿದ್ಯಾಲಯದ ಆಲಯದಲ್ಲಿ ಹಲವಾರು ಕಾಲೇಜುಗಳಲ್ಲಿ ಈ ಕೋರ್ಸ್‌ ಲಭ್ಯವಿದೆ.
ಹಲವು ಕಾಲೇಜುಗಳು ಎಂಎಎಫ್ ಕೋರ್ಸ್ ನೀಡುತ್ತಿರುವುದರ ವಿವರ: 

Government Ramnarayan Chellaram College of Commerce and Management, Bengaluru

www.grccm.org

Indian Aademy Center for Research and Post-graduation Studies, Bengaluru

www.indianacademy.edu.in

Goutham College, Bengaluru

www.gouthamcollege.org

Ganga Kaveri Institute of Science and Management, Bengaluru

Presidency College, Bengaluru

www.presidencycollege.ac.in

ಇನ್ನೂ ಅನೇಕ...

ಉದ್ಯೋಗವಕಾಶಗಳು: ಕಾರ್ಪೋರೇಟ್ ಫೈನಾನ್ಸ್‌

ಫೈನಾನ್ಷಿಯಲ್‌ ಅಕೌಂಟಿಂಗ್ ಕಂಪನಿಗಳು 

ಇಂರ್ಟನಲ್‌ ಅಡಿಟಿಂಗ್ ಆ್ಯಂಡ್ ಕಂಟ್ರೋಲ್‌

ಮ್ಯಾನೇಜ್‌ಮೆಂಟ್ ಕಂಟ್ರೋಲ್‌

ಟ್ರೆಜರಿ ಮ್ಯಾನೇಜ್‌ಮೆಂಟ್

ಇನ್ನೂ ಅನೇಕ...

2. ನಾನು ಪೋಸ್ಟ್ ಬಿ.ಎಸ್ಸಿ. ನರ್ಸಿಂಗ್ ಮುಗಿಸಿದ್ದೇನೆ. ಈಗ ಕಮ್ಯೂನಿಟಿ ನರ್ಸಿಂಗ್‌ನಲ್ಲಿ ಎಂ. ಎಸ್ಸಿ. ಮಾಡಬೇಕು ಎಂದುಕೊಂಡಿದ್ದೇನೆ. ನನ್ನದು ಎಸ್‌.ಟಿ. ಕೆಟಗರಿ. ನನಗೆ ದೊರಕುವ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ತಿಳಿಸಿ. 

-ಹೆಸರು, ಊರು ಬೇಡ

1. ಕರ್ನಾಟಕ ಸರ್ಕಾರ 2016ರಲ್ಲಿ SC/ST ಪಂಗಡದವರು ನರ್ಸಿಂಗ್ ಕೋರ್ಸ್ ಮಾಡುತ್ತಿದ್ದರೆ, ವರ್ಷಕ್ಕೆ ₹5000 ವಿದ್ಯಾರ್ಥಿವೇತನವನ್ನು ನೀಡುವುದಾಗಿ ಘೋಷಿಸಿದೆ.

2. www.karnataka.gov.in ಭಾರತ ಸರ್ಕಾರ, ನ್ಯಾಷನಲ್‌ ಸ್ಕಾಲರ್‌ಶಿಪ್ ಪೋರ್ಟಲ್‌ (www.scholarship.gov.in) ಮೂಲಕ ಹಲವಾರು SC/ST ವಿದ್ಯಾರ್ಥಿವೇತನವನ್ನು ನೀಡುತ್ತಿದೆ. 

3. ಸಮಾಜ್ ಕಲ್ಯಾಣ್ ವಿಭಾಗ್ ಸ್ಕಾಲರ್‌ಶಿಪ್ ಸ್ಕೀಮ್ 

www.ninet.ac.in

4. ಡೈರೆಕ್ಟೋರೇಟ್ ಆಫ್ ಮೈನಾರಿಟೀಸ್‌

www.milligazete.com

5. www.minorityaffairs.gov.in

ಈ ರೀತಿಯ ಹಲವು ವಿದ್ಯಾರ್ಥಿವೇತನಗಳು ಲಭ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !