‘ಎಲ್ಲ ವಾರ್ಡ್‌ನಲ್ಲಿ ಜೈವಿಕ ಅನಿಲ ಘಟಕ’

7

‘ಎಲ್ಲ ವಾರ್ಡ್‌ನಲ್ಲಿ ಜೈವಿಕ ಅನಿಲ ಘಟಕ’

Published:
Updated:
Prajavani

ಬೆಂಗಳೂರು: ‘ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕ ಸ್ಥಾಪನೆಗೆ ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.

ಯಡಿಯೂರು ವಾರ್ಡ್‌ನಲ್ಲಿ ಬಿಬಿಎಂಪಿ ಶನಿವಾರ ಆಯೋಜಿಸಿದ್ದ ‘250 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯದ ಜೈವಿಕ ಅನಿಲ ಘಟಕ’ ಉದ್ಘಾಟಿಸಿ ಅವರು ಮಾತನಾಡಿದರು.

‘ಘಟಕ ಆರಂಭಿಸಲು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುವುದು. ಜೈವಿಕ ಅನಿಲದಿಂದ ಉತ್ವಾದಿಸುವ ವಿದ್ಯುತ್, ಬಿಬಿಎಂಪಿ ಕಟ್ಟಡ,
ಪಾದಚಾರಿ ಮಾರ್ಗ ಹಾಗೂ ಉದ್ಯಾನಗಳಿಗೆ ವಿದ್ಯುತ್ ಸರಬರಾಜು ಮಾಡಬಹುದು. ಕಸದ ಸಮಸ್ಯೆ
ಕೂಡ ಪರಿಹಾರವಾಗಲಿದೆ’ ಎಂದು ಹೇಳಿದರು.

ಶಾಸಕ ಆರ್.ಅಶೋಕ ಮಾತನಾಡಿ, ‘ಶೀಘ್ರದಲ್ಲಿಯೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕ ಸ್ಥಾಪಿಸಲಾಗುವುದು. ಪರಿಸರ ಸಂರಕ್ಷಣೆ ಉದ್ದೇಶದಿಂದ ಘಟಕ ಸ್ಥಾಪನೆ ಅತ್ಯಗತ್ಯ’ ಎಂದು ಹೇಳಿದರು.

ಬಿಜೆಪಿಯ ನಗರ ವಕ್ತಾರ ಎನ್.ಆರ್.ರಮೇಶ್, ‘17 ಪಾಲಿಕೆ ಕಟ್ಟಡ, 13 ಉದ್ಯಾನಗಳು ಮತ್ತು 3 ಕಿ.ಮೀ ಪಾದಚಾರಿ ಮಾರ್ಗಕ್ಕೆ ಜೈವಿಕ ಅನಿಲದಿಂದ ವಿದ್ಯುತ್ ಸಂರ್ಪಕ ಕಲ್ಪಿಸಲಾಗಿದೆ. ಇದರಿಂದ ಪ್ರತಿ ತಿಂಗಳು ₹17 ಲಕ್ಷ ವಿದ್ಯುತ್ ಬಿಲ್ಲು ಉಳಿತಾಯವಾಗುತ್ತದೆ. ಜೈವಿಕ ಅನಿಲ ಘಟಕದಿಂದ ₹32 ಲಕ್ಷ ಮೊತ್ತದ ವಿದ್ಯುತ್ ಉತ್ಪಾದನೆಯಾಗುತ್ತದೆ’ ಎಂದು ತಿಳಿಸಿದರು.

‘ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರ ಹಾಗೂ ಸಾಗಾಣಿಕೆ ವೆಚ್ಚ ಕಡಿತಗೊಳಿಸಲು ನಗರದಲ್ಲಿ 400 ಜೈವಿಕ ಇಂಧನ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಪ್ರತಿದಿನ 2,000 ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದೆ. ಅದನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವುದರ ಬದಲು ಆಯಾ ವಾರ್ಡ್‌ಗಳಲ್ಲಿ ಜೈವಿಕ ಅನಿಲ ಘಟಕಗಳಿಗೆ ಸಾಗಿಸುವುದರಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ. ಹಾಗಾಗಿ, ವಾರ್ಡ್‌ಗೆ ಎರಡರಂತೆ 198 ವಾರ್ಡ್‌ಗಳಲ್ಲಿ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳ
ಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !