ಆಸ್ಕರ್ ನಿಯಮ ಬದಲು ಹಾಲಿವುಡ್‌ನಿಂದ ಟೀಕೆ

7

ಆಸ್ಕರ್ ನಿಯಮ ಬದಲು ಹಾಲಿವುಡ್‌ನಿಂದ ಟೀಕೆ

Published:
Updated:
Prajavani

ಲಾಸ್ ಏಂಜಲೀಸ್ (ಪಿಟಿಐ): ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ನಿಯಮಗಳನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್‌ (ಎಎಂಪಿಎಎಸ್) ಬದಲಿಸಿದ್ದು, ಈ ಕುರಿತು ಹಾಲಿವುಡ್‌ನ ಹಲವರಿಂದ ಟೀಕೆಗಳು ವ್ಯಕ್ತವಾಗಿವೆ. 

ಉತ್ತಮ ಛಾಯಾಗ್ರಹಣ, ಸಂಕಲನ, ಕಿರುಚಿತ್ರ, ಪ್ರಸಾಧನ ಮತ್ತು ಕೇಶವಿನ್ಯಾಸ ವಿಭಾಗಗಳಲ್ಲಿ ನೀಡುವ ಪ್ರಶಸ್ತಿಯನ್ನು ಕಾರ್ಯಕ್ರಮದ ನಡುವಿನ ಜಾಹೀರಾತುಗಳ ಸಂದರ್ಭದಲ್ಲಿ ಘೋಷಿಸಲು ಅಕಾಡೆಮಿ ನಿರ್ಧರಿಸಿದೆ. ಅಲ್ಲದೆ ವಿಜೇತರು ವೇದಿಕೆಗೆ ಬರುವ ಕ್ಷಣಗಳನ್ನು ಚಿತ್ರೀಕರಿಸದೆ ಇರಲು ಮುಂದಾಗಿದೆ. ವಿಜೇತರು ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ಕ್ಷಣಗಳನ್ನು, ಪ್ರಸಾರದ ವೇಳೆ ಪ್ರತ್ಯೇಕವಾಗಿ ತೋರಿಸಲು ಯೋಚಿಸಿದೆ. 

ಕಳೆದ ವರ್ಷ ತಮ್ಮ ‘ದಿ ಶೇಪ್ ಆಫ್ ವಾಟರ್’ ಚಿತ್ರಕ್ಕೆ ಉತ್ತಮ ನಿರ್ದೇಶಕ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದ ಗಿಯರ್ಮೊ ಡೆಲ್ ಟೊರೊ ಅವರು, ‘ಛಾಯಾಗ್ರಹಣ ಹಾಗೂ ಸಂಕಲನ ಚಲನಚಿತ್ರ ಕಲೆಯ ಮೂಲದ್ರವ್ಯ. ಅದು ಸ್ವತಃ ಚಿತ್ರವೇ ಹೌದು. ನಾನಾಗಿದ್ದರೆ ಈ ರೀತಿ ಯೋಚಿಸುತ್ತಲೇ ಇರಲಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !