ಆಕ್ಸ್‌ಫರ್ಡ್‌ ನಿಘಂಟಿನಲ್ಲಿ ಸ್ಥಾನ ಪಡೆದ ‘ಚಡ್ಡಿ’

ಗುರುವಾರ , ಏಪ್ರಿಲ್ 18, 2019
32 °C

ಆಕ್ಸ್‌ಫರ್ಡ್‌ ನಿಘಂಟಿನಲ್ಲಿ ಸ್ಥಾನ ಪಡೆದ ‘ಚಡ್ಡಿ’

Published:
Updated:

ಲಂಡನ್‌: ಭಾರತೀಯರ ಒಳ ಉಡುಪು ‘ಚಡ್ಡಿ’ ಎಂಬುದು ಭಾರತೀಯ ಇಂಗ್ಲಿಷ್‌ನಲ್ಲಿ ‘ಚಡ್ಡೀಸ್‌’. ಈಗ ಈ ಪದಕ್ಕೆ ‘ಆಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷನರಿ’ಯಲ್ಲಿ (ಒಇಡಿ) ಸ್ಥಾನ ನೀಡಲಾಗಿದೆ.

‘ಗುರುವಾರ ಬಿಡುಗಡೆ ಮಾಡಲಾಗಿರುವ ಅಪ್‌ಡೇಟ್‌ ಮಾಡಲಾದ ನಿಘಂಟಿನಲ್ಲಿ ಚಡ್ಡೀಸ್‌ ಸೇರಿದಂತೆ 650 ಹೊಸ ಪದಗಳನ್ನು ಸೇರಿಸಲಾಗಿದೆ. ಈ ಶಬ್ದಗಳನ್ನು ಅಧಿಕೃತವಾಗಿ ಇಂಗ್ಲಿಷ್‌ ಪದಗಳೆಂದು ಮಾನ್ಯತೆ ನೀಡಲಾಗಿದೆ’ ಎಂದು  ಡಿಕ್ಷನರಿಯ ಹಿರಿಯ ಸಹಾಯಕ ಸಂಪಾದಕ ಜೋನಾಥನ್‌ ಡೆಂಟ್‌ ತಿಳಿಸಿದ್ದಾರೆ.

‘ಚಿಕ್ಕದಾದ ಪ್ಯಾಂಟ್‌. ಅದನ್ನು ಅಂಡರ್‌ವೇರ್‌, ಅಂಡರ್‌ ಪ್ಯಾಂಟ್‌’ ಎಂದು ಕರೆಯಲಾಗುತ್ತದೆ ಎಂದು ಈ ನಿಘಂಟಿನಲ್ಲಿ ಅರ್ಥ ನೀಡಲಾಗಿದೆ. 1990ರ ದಶಕದಲ್ಲಿ ಬಿಬಿಸಿಯಲ್ಲಿ ಪ್ರಸಾರವಾಗುತ್ತಿದ್ದ ‘ಗುಡ್‌ನೆಸ್‌ ಗ್ರೇಸಿಯಸ್‌ ಮಿ’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ‘ಚಡ್ಡೀಸ್‌’ ಪದ ಬಳಕೆಯಾಗಿತ್ತು.

ಬರಹ ಇಷ್ಟವಾಯಿತೆ?

 • 19

  Happy
 • 6

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !