ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟು ಬಿಡುಗಡೆ

7

ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟು ಬಿಡುಗಡೆ

Published:
Updated:
Deccan Herald

ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮುದ್ರಣಾಲಯವು ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌. ಜಿ. ಸಿದ್ದರಾಮಯ್ಯ ಮಾತನಾಡಿ, ನಿಘಂಟು ಭಾಷೆಯೊಂದರ ಇತಿಹಾಸವನ್ನು ಪ್ರತಿನಿಧಿಸುತ್ತದೆ ಹಾಗೂ ಜ್ಞಾನ‌ ವಿಸ್ತರಿಸುವಂತಹ ಸಂಪನ್ಮೂಲವಾಗಿದೆ. ಆಕ್ಸ್‌ಫರ್ಡ್‌ ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟು ಎಲ್ಲಾ ವಯಸ್ಸಿನ ಓದುಗರಿಗೆ ಉಪಯೋಗವಾಗಲಿದೆ ಎಂದು ನಂಬಿದ್ದೇನೆ ಎಂದರು.

ಈ ನಿಘಂಟನ್ನು ಸಮಕಾಲೀನ ಮತ್ತು ಬೋಧನೆಯ ಭಾಷೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇಂಗ್ಲಿಷ್‌ ಭಾಷೆ ಕಲಿಯುವವರಿಗೆ ಇದು ಸಹಾಯವಾಗಲಿದೆ. ಇದರಲ್ಲಿ 52,000ಕ್ಕೂ ಹೆಚ್ಚಿನ ಪದಗಳು ‌ಸರಳಗನ್ನಡದಲ್ಲಿವೆ. 200ಕ್ಕೂ ಹೆಚ್ಚಿನ ಚಿತ್ರಗಳು, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇಂಗ್ಲಿಷ್‌ನಲ್ಲಿವೆ. ಜೊತೆಗೆ ಇಂಗ್ಲಿಷ್‌ ವ್ಯಾಕರಣ, ಶಬ್ದಕೋಶ ಮತ್ತು ಪದ ಬಳಕೆ ಕುರಿತು ಟಿಪ್ಪಣೆಗಳಿವೆ ಎಂದು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮುದ್ರಣಾಲಯದ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್‌ ಕೃಷ್ಣನ್‌ ವೆಂಕಟೇಶ್ವರನ್‌ ಹೇಳಿದರು. ಲಕ್ಷ್ಮಿ ನಾರಾಯಣ್‌ ಔರೋರ, ಸಿ.ಎನ್‌.ರಾಮಚಂದ್ರನ್‌, ಬಿ.ವಿ.ಶ್ರೀಧರ್‌, ಪಾರಸ್‌ ಬನ್ಸಾಲ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !