ಆಟೊ ಚಾಲಕನ ಮಗಳಿಗೆ 591 ಅಂಕ

ಮಂಗಳವಾರ, ಏಪ್ರಿಲ್ 23, 2019
27 °C
‘ಪ್ರಜಾವಾಣಿ’ಯಿಂದ ಶೈಕ್ಷಣಿಕ ಪ್ರೋತ್ಸಾಹಧನ ಪಡೆದಿದ್ದ ವಿದ್ಯಾರ್ಥಿನಿ

ಆಟೊ ಚಾಲಕನ ಮಗಳಿಗೆ 591 ಅಂಕ

Published:
Updated:
Prajavani

ಬೆಂಗಳೂರು: ತಂದೆ ಗೂಡ್ಸ್‌ ಆಟೊ ಚಾಲಕ, ತಾಯಿಯದು ಕಾರ್ಖಾನೆಯೊಂದರಲ್ಲಿ ಕೆಲಸ. ಇವರಿಬ್ಬರ ಪ್ರೋತ್ಸಾಹದಿಂದ ಜಿ.ಪಲ್ಲವಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡರು.

ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕ ಮಾರ್ಗದರ್ಶನ, ಸ್ನೇಹಿತರ ಸಹಕಾರ ಸಿಕ್ಕಿದ್ದರಿಂದ ಪಲ್ಲವಿ ಅವರು ವಿಜ್ಞಾನದಲ್ಲಿ 591 ಅಂಕ ಗಳಿಸಿದ್ದಾರೆ.

‘ಅಂದಿನ ಪಾಠಗಳನ್ನು ಅಂದೇ ಓದಿಕೊಂಡು ನೋಟ್ಸ್‌ ಮಾಡಿಟ್ಟುಕೊಳ್ಳುತ್ತಿದ್ದೆ. ಪ್ರತಿದಿನ ಗರಿಷ್ಠ 4 ಗಂಟೆ ಓದುತ್ತಿದ್ದೆ. ತಿಳಿಯದ ಪಠ್ಯವಿಷಯಗಳ ಬಗ್ಗೆ ಪ್ರಶ್ನಿಸಿ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆ’ ಎಂದು ಪಲ್ಲವಿ ತಿಳಿಸಿದರು.

ಎಎಸ್‌ಸಿ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯಾದ ಪಲ್ಲವಿ ಅವರಿಗೆ ಮುಂದೆ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಶನ್‌ನಲ್ಲಿ ಎಂಜಿನಿಯರಿಂಗ್‌ ಓದುವ ಕನಸಿದೆ. ಈ ಕನಸನ್ನು ಈಡೇರಿಸಲು ಅವರ ತಂದೆ ಗೋವಿಂದಯ್ಯ ಈಗಾಗಲೇ ಕಟಿಬದ್ಧರಾಗಿದ್ದಾರೆ. ಆ ಕೋರ್ಸ್‌ ಓದಿಸಲು ತಾವು ಗಳಿಸುವ ದಿನಗೂಲಿಯ ಹಣ ಸಾಲುವುದೇ ಎಂದು ಸಹ ಲೆಕ್ಕಹಾಕುತ್ತಿದ್ದಾರೆ.

ಪಲ್ಲವಿಗೆ ‘ಪ್ರಜಾವಾಣಿ’ ಪ್ರೋತ್ಸಾಹಧನ: ಜಿ.ಪಲ್ಲವಿ ಅವರು ಎಸ್ಸೆಸ್ಸೆಲ್ಸಿ ಪಾಸಾದ ಬಳಿಕ ‘ಪ್ರಜಾವಾಣಿ’ ಕೊಡಮಾಡುವ ಶೈಕ್ಷಣಿಕ ಪ್ರೋತ್ಸಾಹಧನ ಪಡೆದಿದ್ದರು.

‘ಪ್ರೋತ್ಸಾಹಧನವನ್ನು ಕಾಲೇಜಿನ ಶುಲ್ಕ ಭರಿಸಲು ಉಪಯೋಗಿಸಿದೆ. ಓದಿಗೆ ಸಹಾಯ ಮಾಡಿದಕ್ಕೆ ತುಂಬಾ ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !