‘ಆಸಕ್ತಿಯ ಓದಿನಿಂದ ಯಶಸ್ಸು’

ಶನಿವಾರ, ಏಪ್ರಿಲ್ 20, 2019
27 °C

‘ಆಸಕ್ತಿಯ ಓದಿನಿಂದ ಯಶಸ್ಸು’

Published:
Updated:

ಬೆಂಗಳೂರು: ಕುಮಾರನ್ಸ್‌ ಸಂಯುಕ್ತ ಪಿ.ಯು.ಕಾಲೇಜಿನ ವಿದ್ಯಾರ್ಥಿ ಎಸ್‌.ರಜತ್‌ ಕಶ್ಯಪ್‌ ಅವರಿಗೆ ರ‍್ಯಾಂಕ್ ಗಳಿಸುವ ಇರಾದೆ ಇರಲಿಲ್ಲ. ತರಗತಿಯಲ್ಲಿ ಪಾಠಗಳನ್ನು ಆಸಕ್ತಿಯಿಂದ ಕೇಳಿದರು, ಮನೆಯಲ್ಲಿ ಪಠ್ಯವನ್ನು ಮನನ ಮಾಡಿಕೊಳ್ಳಲು ಪ್ರತಿದಿನ ಮೂರ್ನಾಲ್ಕು ಗಂಟೆ ಮೀಸಲಿಟ್ಟರು. ಈ ಸದಭ್ಯಾಸವೇ ಅವರು ವಿಜ್ಞಾನದಲ್ಲಿ ಹೆಚ್ಚು ಅಂಕಗಳಿಸಲು ನೆರವಾಯಿತು.

ಪಿಸಿಎಂಸಿ ಕಾಂಬಿನೇಷನ್‌ ಆಯ್ದುಕೊಂಡಿದ್ದ ರಜತ್‌ ಗಳಿಸಿದ್ದು ಒಟ್ಟು 594 ಅಂಕಗಳು. ಸಂಸ್ಕೃತ 99, ಇಂಗ್ಲಿಷ್‌ 95 ಅಂಕ. ಉಳಿದ ವಿಷಯಗಳಲ್ಲಿ ಸಂಪೂರ್ಣ 100 ಅಂಕಗಳನ್ನು ಗಳಿಸಿ, ವಿಜ್ಞಾನದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

‘ಪ್ರಥಮ ಪಿ.ಯು. ಪಾಸಾದ ಬಳಿಕ ಬೇಸಿಗೆಯಲ್ಲಿ ಕೋಚಿಂಗ್‌ ಹೋಗಿದ್ದೆ. ಹಾಗೆಯೇ ಟ್ಯೂಷನ್‌ಗೂ ಹೋಗುತ್ತಿದೆ. ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಅಭ್ಯಾಸ ಮಾಡಿದೆ. ಜತೆಗೆ ಪೋಷಕರ ಬೆಂಬಲ, ಉಪನ್ಯಾಸಕರ ಮಾರ್ಗದರ್ಶನವು ಯಶಸ್ಸಿನಲ್ಲಿದೆ’ ಎಂದು ರಜತ್‌ ಕಶ್ಯಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಕ್ಯಾನಿಕಲ್‌ ಎಂಜಿನಿಯರ್‌ ಆಗುವ ಗುರಿ ಹೊಂದಿರುವ ರಜತ್‌ ಅವರಿಗೆ ಹಾರ್ಮೋನಿಯಂ ನುಡಿಸುವುದರಲ್ಲಿಯೂ ಆಸಕ್ತಿ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !