ಒಂದೇ ಬೆಂಚ್‌ನ ಸ್ನೇಹಿತರ ಸಾಧನೆ

ಶುಕ್ರವಾರ, ಏಪ್ರಿಲ್ 26, 2019
24 °C

ಒಂದೇ ಬೆಂಚ್‌ನ ಸ್ನೇಹಿತರ ಸಾಧನೆ

Published:
Updated:

ಬೆಂಗಳೂರು: ಗೌತಮ್‌ ರಥಿ ಮತ್ತು ಎಸ್‌.ಪ್ರಣವ್‌ ಶಾಸ್ತ್ರಿ ಅವರು ಕ್ರೈಸ್ಟ್‌ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು. ಎರಡು ವರ್ಷಗಳಿಂದ ತರಗತಿಯ ಒಂದೇ ಬೆಂಚ್‌ನ ಸ್ನೇಹಿತರು. ಈಗ ವಾಣಿಜ್ಯ ವಿಭಾಗದಲ್ಲಿ ತಲಾ 594 ಅಂಕ ಗಳಿಕೆಯ ಸಾಧಕರು ಕೂಡ.

‘ಟ್ಯೂಷನ್‌ಗೆ ಹೋಗಿರಲಿಲ್ಲ. ಹೆಚ್ಚು ಓದಿಗಿಂತ, ಪ್ರತಿನಿತ್ಯ ಮೂರು ತಾಸಿನ ಏಕಾಗ್ರತೆಯ ಓದಿಗೆ ಆದ್ಯತೆ ನೀಡುತ್ತಿದ್ದೆ’ ಎಂದು ಗೌತಮ್‌ ತಿಳಿಸಿದರು.

‘ದೆಹಲಿಯ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ನಲ್ಲಿ ಬಿ.ಕಾಂ. ಓದಬೇಕು ಅಂದುಕೊಂಡಿದ್ದೇನೆ. ಬಳಿಕ ಲೆಕ್ಕ ಪರಿಶೋಧಕ(ಸಿ.ಎ.) ಆಗಬೇಕೆಂದಿದ್ದೇನೆ’ ಎಂದು ಮುಂದಿನ ದಾರಿ ತಿಳಿಸಿದರು. ಇವರಿಗೆ ಫುಟ್‌ಬಾಲ್‌ ಆಟ ಮತ್ತು ಕಾದಂಬರಿಗಳ ಓದು ಇಷ್ಟದ ಹವ್ಯಾಸ.

ಎಸ್ಸೆಸ್ಸೆಲ್ಸಿಯಲ್ಲೂ ಸಾಧಕ: ಎಸ್‌.ಪ್ರಣವ್‌ ಶಾಸ್ತ್ರಿ ಅವರು ಎಸ್ಸೆಸ್ಸೆಲ್ಸಿಯಲ್ಲಿ ಶೇ 99.7 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಮೂರನೇ ಸ್ಥಾನ ಬಂದಿದ್ದರು. ಈಗ ಪಿ.ಯು.ನಲ್ಲೂ 594 ಅಂಕ ಪಡೆದು ಮೂರನೆ ಸ್ಥಾನಕ್ಕೇರಿದ್ದಾರೆ.

ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಸಂಖ್ಯಾಶಾಸ್ತ್ರ, ಸಂಸ್ಕೃತದಲ್ಲಿ ತಲಾ 100 ಅಂಕ ಮತ್ತು ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾರೆ.

‘ಪಠ್ಯಪುಸ್ತಕಗಳ ಕ್ರಮಬದ್ಧ ಅಧ್ಯಯನ, ಪಿ.ಯು.ಮಂಡಳಿ ಸಿದ್ಧಪಡಿಸಿದ್ಧ ಅಧ್ಯಯನ ಸಾಮಗ್ರಿಯ ಮನನ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ಅಭ್ಯಾಸದಿಂದಾಗಿ ಉತ್ತಮ ಅಂಕಗಳು ಬಂದಿವೆ’ ಎಂದು ಯಶಸ್ಸಿನ ಗುಟ್ಟು ಹೇಳಿದರು  ಪ್ರಣವ್‌. 

ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪ್ರಣವ್‌ಗೆ ಗಿಟಾರ್‌ ನುಡಿಸುವುದು ಇಷ್ಟವಂತೆ.

‘ಒತ್ತಡ ರಹಿತ ಓದೇ ಯಶಸ್ಸಿನ ಗುಟ್ಟು’

‘ವೇಳಾಪಟ್ಟಿ ಹಾಕಿಕೊಂಡು ಓದುತ್ತಿರಲಿಲ್ಲ. ದಿನಕ್ಕೆ 3 ಗಂಟೆ ಆಸಕ್ತಿಯಿಂದ ಓದುತ್ತಿದ್ದೆ. ಗಣಿತ, ಗಣಕವಿಜ್ಞಾನದಲ್ಲಿ ತಲಾ 100, ಭೌತವಿಜ್ಞಾನ, ರಸಾಯನವಿಜ್ಞಾನ, ಸಂಸ್ಕೃತದಲ್ಲಿ ತಲಾ 99 ಹಾಗೂ ಇಂಗ್ಲಿಷ್‌ನಲ್ಲಿ 96 ಅಂಕ ಬಂದಿರುವುದಕ್ಕೆ ತುಂಬ ಸಂತಸವಾಗಿದೆ’ ಎಂದು ಪ್ರಿಯಾ ನಾಯಕ್‌ ಅನಿಸಿಕೆ ಹಂಚಿಕೊಂಡರು.

‘ಇಂತಿಷ್ಟು ಗಂಟೆ ಓದಲೇಬೇಕೆಂದು ಅಪ್ಪ–ಅಮ್ಮ ಒತ್ತಡ ಹಾಕುತ್ತಿರಲಿಲ್ಲ. ಹಾಗಾಗಿ ನಿರಾಳವಾಗಿ, ಬಿಡುವಿದ್ದಾಗ ಆಸಕ್ತಿಯಿಂದ ಓದುತ್ತಿದ್ದೆ’ ಎಂದರು.

593 ಅಂಕ ಗಳಿಸಿರುವ ಇವರಿಗೆ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಓದುವ ಗುರಿಯಿದೆ. ಕರ್ನಾಟಕ ಸಂಗೀತದಲ್ಲೂ ಆಸಕ್ತಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !