ಐಎಸ್‌ಐಗೆ ನೂತನ ಮುಖ್ಯಸ್ಥ

ಗುರುವಾರ , ಜೂಲೈ 18, 2019
29 °C

ಐಎಸ್‌ಐಗೆ ನೂತನ ಮುಖ್ಯಸ್ಥ

Published:
Updated:
Prajavani

ಇಸ್ಲಾಮಾಬಾದ್: ಗೂಢಚರ ಸಂಸ್ಥೆ ಐಎಸ್‌ಐಗೆ ಪಾಕಿಸ್ತಾನ ಸೇನೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಿದೆ. 

ಲೆ.ಜನರಲ್ ಫೈಜ್ ಹಮೀದ್ ಅವರನ್ನು ಐಎಸ್‌ಐ ಪ್ರಧಾನ ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್‌ ತಿಳಿಸಿದೆ.

ಐಎಸ್‌ಐನ ಆಂತರಿಕ ರಕ್ಷಣೆ ವಿಭಾಗದ ಮುಖ್ಯಸ್ಥರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅವರು, ಸೇನೆಯ ಮುಖ್ಯಸ್ಥ ಖಮರ್ ಬಜ್ವಾ ಅವರ ಆಪ್ತ ಎಂದು ಭಾವಿಸಲಾಗಿದೆ. 

‘ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯ ಸವಾಲುಗಳನ್ನು ಎದುರಿಸಲು ಹಮೀದ್ ಅವರ ಅನುಭವ ನೆರವಾಗಲಿದೆ’ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !