ಕಾಶ್ಮೀರ ವಿಷಯ ಚರ್ಚಿಸಿದ ಪಾಕ್ ಸೇನಾಪಡೆ ಮುಖ್ಯಸ್ಥ

7

ಕಾಶ್ಮೀರ ವಿಷಯ ಚರ್ಚಿಸಿದ ಪಾಕ್ ಸೇನಾಪಡೆ ಮುಖ್ಯಸ್ಥ

Published:
Updated:

ಇಸ್ಲಾಮಾಬಾದ್: ಪಾಕಿಸ್ತಾನ ಸೇನಾಪಡೆ ಮುಖ್ಯಸ್ಥ ಖಮರ್ ಬಜ್ವಾ ಅವರು ಸೋಮವಾರ ಕಮಾಂಡರ್‌ಗಳ ಸಮಾವೇಶ ನಡೆಸಿ, ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ಕಾಶ್ಮೀರ ದಿನಾಚರಣೆಯ ಮುನ್ನಾ ದಿನ ಈ ಬೆಳವಣಿಗೆಯಾಗಿದೆ. 

ಆಂತರಿಕ ಭದ್ರತೆ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಎದುರಿಸಲು ಬೇಕಾದ ಸನ್ನದ್ಧತೆ ಕುರಿತು ಪರಿಶೀಲಿಸಲು ರಾವಲ್ಪಿಂಡಿಯಲ್ಲಿ ಈ ಸಭೆ ನಡೆಸಲಾಗಿದೆ. ಬಜ್ವಾ ಅವರು ‘ಕಾಶ್ಮೀರದ ಸಹೋದರರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ’ ಎಂದು ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದಾರೆ. 

ಸ್ವತಂತ್ರ ಕಾಶ್ಮೀರಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿ ವರ್ಷ ಫೆ.5ರಂದು ಪಾಕಿಸ್ತಾನ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿಗಳು ಕಾಶ್ಮೀರ ದಿನ ಆಚರಿಸುತ್ತಾರೆ. 

ಈಚೆಗಷ್ಟೆ ಪಾಕಿಸ್ತಾನದ ವಿದೇಶಾಂಗ ಸಚಿವರು ಕಾಶ್ಮೀರದ ಇಬ್ಬರು ಪ್ರತ್ಯೇಕತಾವಾದಿ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಭಾರತ, ಪಾಕಿಸ್ತಾನದ ರಾಯಭಾರಿ ಸೊಹೈಲ್ ಮೊಹಮ್ಮದ್ ಅವರಿಗೆ ಈ ಕುರಿತು ಅವರಿಗೆ ಎಚ್ಚರಿಕೆ ನೀಡಿತ್ತು.

ವಿದೇಶಾಂಗ ಸಚಿವರ ಧೋರಣೆ, ಭಾರತದ ಜತೆಗಿನ ಬಾಂಧವ್ಯ ಕುರಿತು ಪಾಕಿಸ್ತಾನಿ ನಾಯಕರು ಇಬ್ಬಂದಿ ನಿಲುವು ಹೊಂದಿರುವುದನ್ನು ಇದು ತೋರುತ್ತದೆ ಎಂದು ಭಾರತ ಪ್ರತಿಕ್ರಿಯಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !