ಸಾಮಾಜಿಕ ಮಾಧ್ಯಮ ದುರ್ಬಳಕೆ: 24 ವರ್ಷ ಜೈಲು

7

ಸಾಮಾಜಿಕ ಮಾಧ್ಯಮ ದುರ್ಬಳಕೆ: 24 ವರ್ಷ ಜೈಲು

Published:
Updated:
Prajavani

ಲಾಹೋರ್‌: ಸಾಮಾಜಿಕ ಮಾಧ್ಯಮಗಳಲ್ಲಿನ ಖಾತೆಗಳಿಗೆ ಕನ್ನ ಹಾಕಿ, ವೈದ್ಯೆಯರು ಮತ್ತು ಶುಶ್ರೂಷಕಿಯರು ಸೇರಿದಂತೆ 200 ಮಹಿಳೆಯರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ 24 ವರ್ಷ ಜೈಲು ಶಿಕ್ಷೆ ಹಾಗೂ ₹7 ಲಕ್ಷ ದಂಡ ವಿಧಿಸಿದೆ.

ಸಾಮಾಜಿಕ ಮಾಧ್ಯಮ ಅಪರಾಧಕ್ಕೆ ಸಂಬಂಧಿಸಿದಂತೆ ಇಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಅಬ್ದುಲ್‌ ವಹಾಬ್‌ ಶಿಕ್ಷೆಗೆ ಗುರಿಯಾದವನು. 

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಖಾತೆಗೆ ಕನ್ನ ಹಾಕಿ, ಅಶ್ಲೀಲ ಚಿತ್ರಗಳನ್ನು ನಿಮ್ಮ ಖಾತೆಗಳಲ್ಲಿ ಅಪ್‌ಲೊಡ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಪಂಜಾಬ್‌ನ ಲಯ್ಯಾಹ್‌ ಜಿಲ್ಲೆ ನಿವಾಸಿ ವಹಾಬ್‌ನನ್ನು 2015ರಲ್ಲಿ ಬಂಧಿಸಲಾಗಿತ್ತು. ಯುವ ವೈದ್ಯರ ಸಂಘಟನೆ (ವೈಡಿಎ) ನೀಡಿದ ದೂರಿನ ಅನ್ವಯ, ವಹಾಬ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. 

‘ವೈದ್ಯೆಯರ ಮತ್ತು ಶುಶ್ರೂಷಕಿಯರ ವಾಟ್ಸ್‌ಆ್ಯಪ್‌ ಖಾತೆಯನ್ನೂ ವಹಾಬ್‌ ಹ್ಯಾಕ್‌ ಮಾಡಿದ್ದಾನೆ. ಆಕ್ಷೇಪಾರ್ಹ ವಿಡಿಯೊಗಳು ಮತ್ತು ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಲ್ಲದೆ, ಹಣ ನೀಡುವಂತೆ ಪೀಡಿಸುತ್ತಿದ್ದಾನೆ’ ಎಂದು ವೈಡಿಎದ ಡಾ. ಸಲ್ಮಾನ್‌ ಕಝ್ಮಿ ದೂರು ನೀಡಿದ್ದರು. 

ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ವಹಾಬ್‌ ಶಿಕ್ಷೆ ಅನುಭವಿಸಲಿದ್ದಾನೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !