ಭಾರತದ ಜೊತೆ ಮಾತುಕತೆ: ಅಮೆರಿಕ ಮಧ್ಯಸ್ಥಿಕೆಗೆ ಪಾಕ್‌ ಮನವಿ

7
ಸಚಿವ ಖುರೇಷಿ ಮನವಿ* ಅಮೆರಿಕ ತಿರಸ್ಕಾರ

ಭಾರತದ ಜೊತೆ ಮಾತುಕತೆ: ಅಮೆರಿಕ ಮಧ್ಯಸ್ಥಿಕೆಗೆ ಪಾಕ್‌ ಮನವಿ

Published:
Updated:
Deccan Herald

ವಾಷಿಂಗ್ಟನ್‌: ‘ಭಾರತದ ಜೊತೆ ಪಾಕಿಸ್ತಾನ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಅಮೆರಿಕ ಮಧ್ಯಸ್ಥಿಕೆ ವಹಿಸಬೇಕು’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಮನವಿ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಅಮೆರಿಕ ಸಾರಸಾಗಾಟಾಗಿ ತಿರಸ್ಕರಿಸಿದೆ.

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ  ಮೈಕ್‌ ಪಾಂಪಿಯೊ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬಾಲ್ಟನ್‌ ಅವರನ್ನು ಬುಧವಾರ ಭೇಟಿಯಾಗಿದ್ದರು. ಈ ವೇಳೆ ಈ ವಿಚಾರವನ್ನು ಪ‍್ರಸ್ತಾಪಿಸಿದ್ದರು. ಆದರೆ ಈ ಮನವಿಯನ್ನು ಅಮೆರಿಕ ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದು ಖುರೇಷಿ ತಿಳಿಸಿದರು.

‘ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕವನ್ನು ನಾವು ಏಕೆ ಕೋರುತ್ತೇವೆ ? ನಾವು ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುತ್ತಿಲ್ಲ. ದ್ವಿಪಕ್ಷೀಯ ಮಾತುಕತೆಗಳು ಗೊಂದಲಕ್ಕೆ ಈಡುಮಾಡುತ್ತವೆ, ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಮೆರಿಕ ಚಿಂತಕರ ಚಾವಡಿ ‘ಯುಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಪೀಸ್‌’ ಏರ್ಪಡಿಸಿದ್ದ ಸಂವಾದದಲ್ಲಿ ತಿಳಿಸಿದರು.

ಪಾಕಿಸ್ತಾನದ ಜೊತೆಗೆ ಮಾತುಕತೆಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಮೊದಲಿನಿಂದಲೂ ವಿರೋಧಿಸುತ್ತಿದೆ. ಕಾಶ್ಮೀರ ಸೇರಿದಂತೆ ಎಲ್ಲ ವಿಚಾರಗಳ ಭಿನ್ನಮತ ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಬೇಕು ಎಂಬುದು ಪಾಕಿಸ್ತಾನದ ವಾದ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !