ಮತಾಂತರ ಆರೋಪ: ತನಿಖೆಗೆ ಸಮಿತಿ ರಚನೆ

ಶುಕ್ರವಾರ, ಏಪ್ರಿಲ್ 19, 2019
22 °C
ಮತಾಂತರ, ಬಲವಂತದ ಮದುವೆ ಪ್ರಕರಣ

ಮತಾಂತರ ಆರೋಪ: ತನಿಖೆಗೆ ಸಮಿತಿ ರಚನೆ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಸಿಂಧ್ ಪ್ರಾಂತ್ಯದಲ್ಲಿ ಈಚೆಗೆ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ ಪ್ರಕರಣದ ತನಿಖೆ ನಡೆಸಲು ಮಂಗಳವಾರ ಇಸ್ಲಾಮಾಬಾದ್‌ ಹೈಕೋರ್ಟ್‌
ಐವರು ಸದಸ್ಯರ ಸ್ವತಂತ್ರ ಸಮಿತಿ ರಚಿಸಿದೆ. 

ತಮಗೆ ರಕ್ಷಣೆ ನೀಡಬೇಕೆಂದು ಬಾಲಕಿಯರಾದ ರವೀನಾ (13), ರೀನಾ (15) ಅವರು ಕೋರಿದ್ದ ಅರ್ಜಿಯ ವಿಚಾರಣೆಯನ್ನು
ಮುಖ್ಯನ್ಯಾಯಮೂರ್ತಿ ಐಎಚ್‌ಸಿ ಅಥರ್ ಮಿನಾಲ್ಲ ನೇತೃತ್ವದ ಪೀಠ ನಡೆಸಿತು. 

ಸಫ್ದರ್ ಅಲಿ ಮತ್ತು ಬರ್ಕತ್‌ ಅಲಿ ಬಲವಂತವಾಗಿ ಮದುವೆಯಾಗಿದ್ದಾರೆ ಎಂದು ಈ ಸಹೋದರಿಯರು ಆರೋಪಿಸಿದ್ದಾರೆ. 

ಪ್ರಕರಣದ ಪಾರದರ್ಶಕ ತನಿಖೆಗಾಗಿ, ಮಾನವ ಹಕ್ಕುಗಳ ಸಚಿವ ಶಿರಿನ್‌ ಮಜಾರಿ, ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಮೆಹದಿ ಹಸನ್‌, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಖವಾರ್‌ ಮಮ್ತಾಜ್‌, ಮಾನವ ಹಕ್ಕುಗಳ ಹೋರಾಟಗಾರ ಐ.ಎ ರೆಹಮಾನ್‌, ಇಸ್ಲಾಮಿಕ್‌ ವಿದ್ವಾಂಸ ಮುಫ್ತಿ ತಾಖಿ ಉಸ್ಮಾನಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಇದರ ಸಭೆ ಆಯೋಜಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. 

ಇಸ್ಲಾಮಿನ ಬೋಧನೆಯಿಂದ ಪ್ರಭಾವಿತರಾಗಿ ಸ್ವಇಚ್ಛೆಯಿಂದಲೇ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಗಿ ಬಾಲಕಿಯರು ಅರ್ಜಿಯಲ್ಲಿ ತಿಳಿಸಿ
ದ್ದಾರೆ. ಆದರೆ ಬಾಲಕಿಯರ ಪೋಷಕರು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !