ಜೆಯುಡಿ, ಎಫ್‌ಐಎಫ್‌ ನಿಷೇಧ

ಶನಿವಾರ, ಮಾರ್ಚ್ 23, 2019
22 °C

ಜೆಯುಡಿ, ಎಫ್‌ಐಎಫ್‌ ನಿಷೇಧ

Published:
Updated:

ಸ್ಲಾಮಾಬಾದ್‌ (ಪಿಟಿಐ): ಜಮಾತ್‌–ಉದ್‌–ದವಾ (ಜೆಯುಡಿ) ಮತ್ತು ಅದರ ಅಂಗಸಂಸ್ಥೆ ಫಲಾಹ್‌–ಎ–ಇನ್ಸಾನಿಯಾತ್‌ ಪ್ರತಿಷ್ಠಾನವನ್ನು (ಎಫ್‌ಐಎಫ್‌) ಪಾಕಿಸ್ತಾನ ಮಂಗಳವಾರ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದೆ.

ಗೃಹ ಸಚಿವಾಲಯದ ಅಧಿಸೂಚನೆ ಅನ್ವಯ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ (ಎನ್‌ಎಸಿಟಿಎ) ಹೊಸ ಪಟ್ಟಿಯನ್ನು ಸಿದ್ಧಪಡಿಸಿದೆ. ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಪಟ್ಟಿ ಮಾಡಲಾಗಿದ್ದ 70 ಸಂಘಟನೆಗಳಲ್ಲಿ ಜೆಯುಡಿ ಮತ್ತು ಎಫ್‌ಐಎಫ್‌ ಸೇರಿದ್ದವು.

ಜೆಯುಡಿ ಮತ್ತು ಎಫ್‌ಐಎಫ್‌ ಸಂಘಟನೆಗಳನ್ನು ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಫೆಬ್ರುವರಿ 21ರಂದು ಹೇಳಿತ್ತು.  ಆದರೆ, ಈ ಎರಡು ಉಗ್ರ ಸಂಘಟನೆಗಳನ್ನು ಕೇವಲ ನಿಗಾವಹಿಸುವ ಪಟ್ಟಿಯಲ್ಲಿರಿಸಲಾಗಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿ ಬಳಿಕ ಪಾಕಿಸ್ತಾನ ಈ ಕ್ರಮಕೈಗೊಂಡಿದೆ.

ಜೆಯುಡಿ ಮತ್ತು ಎಫ್‌ಐಎಫ್‌ ಸೇರಿದಂತೆ ವಿಶ್ವಸಂಸ್ಥೆ ನಿಷೇಧಿಸಿದ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿತ್ತು.

ಜೆಯುಡಿ ಮತ್ತು ಎಫ್‌ಐಎಫ್‌ ಸುಮಾರು 50 ಸಾವಿರ ಸ್ವಯಂ ಸೇವಾ ಕಾರ್ಯಕರ್ತರನ್ನು ಹೊಂದಿವೆ ಮತ್ತು ವೇತನ ಪಡೆದು ಕಾರ್ಯನಿರ್ವಹಿಸುವ ನೂರಾರು ಮಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತದ ಚಲನಚಿತ್ರಕ್ಕೆ ನಿಷೇಧ: ಖಾಸಗಿ ಚಾನೆಲ್‌ಗಳು ಭಾರತದ ಚಲನಚಿತ್ರ ಮತ್ತು ಟಿ.ವಿ. ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನಿಷೇಧಿಸಿದೆ.

ಪಾಕಿಸ್ತಾನದಲ್ಲಿ ಭಾರತದ ಚಾನೆಲ್‌ಗಳಿಗೆ ಲಾಹೋರ್‌ ಹೈಕೋರ್ಟ್‌ ಅವಕಾಶ ನೀಡಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದ ವಕೀಲರು ಲಾಹೋರ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !