ಇಂಗ್ಲಿಷ್‌ ಬಳಸಿದ ಭುಟ್ಟೊಗೆ ಇಮ್ರಾನ್‌ ತರಾಟೆ

ಭಾನುವಾರ, ಏಪ್ರಿಲ್ 21, 2019
32 °C

ಇಂಗ್ಲಿಷ್‌ ಬಳಸಿದ ಭುಟ್ಟೊಗೆ ಇಮ್ರಾನ್‌ ತರಾಟೆ

Published:
Updated:
Prajavani

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್‌ನಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ ವಿರೋಧಪಕ್ಷದ ನಾಯಕ ಬಿಲಾವಲ್‌ ಭುಟ್ಟೊ ಜರ್ದಾರಿಯವರನ್ನು ಪ್ರಧಾನಿ ಇಮ್ರಾನ್‌ ಖಾನ್‌ ತರಾಟೆಗೆ ತೆಗೆದುಕೊಂಡಿದ್ದಾರೆ. 

ಇಲ್ಲಿನ ಹೈದರಾಬಾದ್‌ ವಿಶ್ವವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್‌, ‘ಸಂಸತ್ತಿನಲ್ಲಿ ಮಾತನಾಡುವ ವೇಳೆ ಜನಪ್ರತಿನಿಧಿಗಳು ಇಂಗ್ಲಿಷ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಗ್ಲಿಷ್‌ ಗೊತ್ತಿರದ ಶೇ 90ರಷ್ಟು ಜನಸಂಖ್ಯೆ ಹೊಂದಿರುವ ದೇಶಕ್ಕೆ ಮಾಡುವ ಅವಮಾನವಿದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಓದಿರುವ 30 ವರ್ಷದ ಬಿಲಾವಲ್‌, ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಅಧ್ಯಕ್ಷರಾಗಿದ್ದಾರೆ.

‘ದೇಶದ ಬಹುಸಂಖ್ಯಾತ ಜನರಿಗೆ ಇಂಗ್ಲಿಷ್‌ ಗೊತ್ತಿಲ್ಲ ಎಂದು ತಿಳಿದ ಮೇಲೂ ಜನಪ್ರತಿನಿಧಿಯಾದವರು ಸಂಸತ್ತಿನಲ್ಲಿ ಅಥವಾ ಸಾರ್ವಜನಿಕ ಸಮಾರಂಭಗಳಲ್ಲಿ ಏಕೆ ಇಂಗ್ಲಿಷ್‌ ಮಾತನಾಡಬೇಕು. ಉರ್ದು ಗೊತ್ತಿದ್ದೂ, ಇಂಗ್ಲಿಷ್‌ನಲ್ಲಿ ಮಾತನಾಡುವುದು ಎಷ್ಟು ಸರಿ’ ಎಂದೂ ಇಮ್ರಾನ್‌ಖಾನ್‌ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !