ಐಎಂಎಫ್ ಮುಖ್ಯಸ್ಥೆ ಲಗಾರ್ಡೆ ಭೇಟಿಯಾಗಿ ನೆರವು ಕೋರಿದ ಪಾಕಿಸ್ತಾನ ಪ್ರಧಾನಿ ಖಾನ್

7

ಐಎಂಎಫ್ ಮುಖ್ಯಸ್ಥೆ ಲಗಾರ್ಡೆ ಭೇಟಿಯಾಗಿ ನೆರವು ಕೋರಿದ ಪಾಕಿಸ್ತಾನ ಪ್ರಧಾನಿ ಖಾನ್

Published:
Updated:
Prajavani

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಪರಿಹಾರ ಮಾರ್ಗಗಳ ಕುರಿತಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಅವರ ಜೊತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಾನುವಾರ ಚರ್ಚೆ ನಡೆಸಿದರು.

ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಕ್‌ ಮೊಹಮ್ಮದ್‌ ಬಿನ್‌ ರಷೀಸ್‌ ಅಲ್‌ ಮಕ್ಟೋಮ್‌ ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಆಗಮಿಸಿದ್ದ ವಿಶ್ವ ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಲಗಾರ್ಡ್‌ ಜೊತೆಗೆ ಚರ್ಚೆ ನಡೆಸಿದ್ದಾರೆ.

’ರಕ್ಷಣೆ, ಸಬ್ಸಿಡಿ ಹಾಗೂ ಅನಗತ್ಯ ಸಾಲದ ವಿಚಾರದಲ್ಲಿ ಕಡಿತ ಮಾಡುವಂತೆ ಪಾಕಿಸ್ತಾನದ ಮೇಲೆ ಐಎಂಎಫ್‌ ಒತ್ತಡ ಹೇರುತ್ತಿದೆ. ದೇಶದ ಆರ್ಥಿಕ ನೀತಿ, ಇಂಧನ ಕ್ಷೇತ್ರ, ರಚನಾತ್ಮಕ ಸುಧಾರಣೆ ಕುರಿತಂತೆ ಪರಿಣಾಮಕಾರಿ ಮಾತುಕತೆ ನಡೆಯುತ್ತಿದೆ‘ ಎಂದು ಪಾಕಿಸ್ತಾನ ಹಣಕಾಸು ಇಲಾಖೆಯ ವಕ್ತಾರ ಖಕಾನ್‌ ನಜೀಬ್‌ ತಿಳಿಸಿದ್ದಾರೆ.

’ದೇಶದ ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಹಣಕಾಸು ಸಚಿವ ಅಸದ್‌ ಉಮರ್‌ ಅವರು ಈಗಾಗಲೇ ಐಎಂಎಫ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂದಾಜಿನ ಪ್ರಕಾರ, ಐಎಂಎಫ್‌ನಿಂದ ಸುಮಾರು  8 ಬಿಲಿಯನ್‌ ಡಾಲರ್‌ (5.68 ಲಕ್ಷ ಕೋಟಿ ರೂ) ನಷ್ಟು ಪಾಕಿಸ್ತಾನ ಆರ್ಥಿಕ ನೆರವು ಎದುರುನೋಡುತ್ತಿದೆ. ವಿದೇಶಿ ವಿನಿಮಯ ಸಂಗ್ರಹ ಕೊರತೆಯಿಂದ ಬಳಲುತ್ತಿದ್ದ ಪಾಕಿಸ್ತಾನಕ್ಕೆ  ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ರಾಷ್ಟ್ರಗಳು ತಲಾ 1 ಬಿಲಿಯನ್‌ ಡಾಲರ್‌ (71 ಸಾವಿರ ಕೋಟಿ) ನೆರವು ನೀಡಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !