ಮಿಲಿಟರಿ ಸಂಘರ್ಷಕ್ಕೆ ಬಾಹ್ಯಾಕಾಶ ಬಳಕೆ ಕಡಿವಾಣಕ್ಕೆ ಪಣ

ಭಾನುವಾರ, ಜೂನ್ 16, 2019
28 °C
ಪಾಕಿಸ್ತಾನ, ರಷ್ಯಾ ಕಳವಳ:

ಮಿಲಿಟರಿ ಸಂಘರ್ಷಕ್ಕೆ ಬಾಹ್ಯಾಕಾಶ ಬಳಕೆ ಕಡಿವಾಣಕ್ಕೆ ಪಣ

Published:
Updated:

ಬಿಷ್ಕೆಕ್‌/ಇಸ್ಲಾಮಾಬಾದ್‌: ಬಾಹ್ಯಾಕಾಶವನ್ನು ವಿವಿಧ ದೇಶಗಳು ತಮ್ಮ ಮಿಲಿಟರಿ ಸಾಮರ್ಥ್ಯ ಪ್ರದರ್ಶನ ಅಥವಾ ಸಂಘರ್ಷಕ್ಕೆ ವೇದಿಕೆಯಂತೆ ಬಳಸುತ್ತಿರುವ ಬಗ್ಗೆ ಪಾಕಿಸ್ತಾನ ಮತ್ತು ರಷ್ಯಾ ಕಳವಳ ವ್ಯಕ್ತಪಡಿಸಿವೆ. ಇಂತಹ ವಿದ್ಯಮಾನಕ್ಕೆ ಕಡಿವಾಣ ಹಾಕಲು ಉಭಯ ದೇಶಗಳು ಪಣ ತೊಟ್ಟಿವೆ.

ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಸಚಿವರ ಮಂಡಳಿಯ ಸಮಾವೇಶದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಹಾಗೂ ರಷ್ಯಾ ಸಚಿವ ಸರ್ಗೇ ಲವರೋವ್ ಅವರು ಈ ಸಂಬಂಧ ಬುಧವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು.

‘ಆ್ಯಂಟಿ ಸೆಟಲೈಟ್‌ ಕ್ಷಿಪಣಿ’ಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಎರಡು ತಿಂಗಳ ನಂತರ, ಪಾಕಿಸ್ತಾನ ಮತ್ತು ರಷ್ಯಾ ಕೈಗೊಂಡಿರುವ ಈ ತೀರ್ಮಾನಕ್ಕೆ ಮಹತ್ವ ಬಂದಿದೆ.

‘ಬಾಹ್ಯಾಕಾಶದಲ್ಲಿ ಎರಡೂ ದೇಶಗಳು ತಾವಾಗಿಯೇ ಮೊದಲು ಶಸ್ತ್ರಾಸ್ತ್ರ ಬಳಸುವುದಿಲ್ಲ’ ಎಂಬ ಒಕ್ಕಣೆಯುಳ್ಳ ಹೇಳಿಕೆಗೆ ಉಭಯ ಸಚಿವರು ಸಹಿ ಹಾಕಿದರು.

‘ವಿಶ್ವದ ರಾಷ್ಟ್ರಗಳ ಆರ್ಥಿಕ, ವೈಜ್ಞಾನಿಕ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿರಲಿ, ಚಾಲ್ತಿಯಲ್ಲಿರುವ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಬಾಹ್ಯಾಕಾಶ ಬಳಸಬೇಕು’ ಎಂದೂ ಜಂಟಿ ಹೇಳಿಕೆಯಲ್ಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

‘ವಿವಿಧ ಉದ್ದೇಶಗಳಿಗಾಗಿ ಉಡಾವಣೆ ಮಾಡಲಾಗಿರುವ ಆಕಾಶಕಾಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ಬಲಪ್ರಯೋಗ, ಬ್ಯಾಲಿಸ್ಟಿಕ್‌ ಕ್ಷಿಪಣಿ ವಿರೋಧಿ ವ್ಯವಸ್ಥೆಯ ಅಭಿವೃದ್ಧಿ ಮತ್ತು ನಿಯೋಜನೆಯಿಂದ ಬಾಹ್ಯಾಕಾಶದ ಸುರಕ್ಷತೆ ಕುರಿತಂತೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿದೆ’ ಎಂದೂ ಪಾಕಿಸ್ತಾನ ಅಭಿಪ್ರಾಯಪಟ್ಟಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !