ಸೋಮವಾರ, ಅಕ್ಟೋಬರ್ 14, 2019
22 °C

ವಿಶ್ವಸಂಸ್ಥೆಯಲ್ಲಿ ಕಾಯಂ ಪ್ರತಿನಿಧಿ ಲೋಧಿ ಅಧಿಕಾರ ಅವಧಿ ಮುಗಿದಿತ್ತು: ಪಾಕಿಸ್ತಾನ

Published:
Updated:

ಇಸ್ಲಾಮಾಬಾದ್‌: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿಯಾಗಿದ್ದ ಡಾ. ಮಲೀಹಾ ಲೋಧಿ ಅವರನ್ನು ವಜಾಗೊಳಿಸಲಾಗಿದೆ ಎಂಬ ಆರೋಪ ಸರಿಯಿಲ್ಲ. ಅವರ ಅಧಿಕಾರ ಅವಧಿ ಮುಗಿದ ಕಾರಣ ಅವರ ಜಾಗಕ್ಕೆಮುನೀರ್‌ ಅಕ್ರಂ ಅವರನ್ನು ನೇಮಿಸಲಾಗಿದೆ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

‘ಲೋಧಿ ಅವರು ತಮ್ಮಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಅವರನ್ನು ವಜಾಗೊಳಿಸಲಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ’  ಎಂದು ಪಾಕ್‌ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.

Post Comments (+)