182 ಮದರಸಾ ಮೇಲೆ ದಾಳಿ

ಬುಧವಾರ, ಮಾರ್ಚ್ 27, 2019
26 °C
ನಿಷೇಧಿತ ಉಗ್ರ ಸಂಘಟನೆಗಳನ್ನು ನಡೆಸುತ್ತಿದ್ದವರು ವಶಕ್ಕೆ

182 ಮದರಸಾ ಮೇಲೆ ದಾಳಿ

Published:
Updated:

ಇಸ್ಲಾಮಾಬಾದ್: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಹೇಳಿರುವ ಪಾಕಿಸ್ತಾನ ಸರ್ಕಾರ, ‘ಜೈಷ್–ಎ–ಮೊಹಮ್ಮದ್ ಸೇರಿದಂತೆ ಹಲವು ನಿಷೇಧಿತ ಉಗ್ರ ಸಂಘಟನೆಗಳು ನಡೆಸುತ್ತಿರುವ 182 ಮದರಸಾಗಳ ಮೇಲೆ ನಿಯಂತ್ರಣ ಸಾಧಿಸಲಾಗಿದೆ. 121 ಜನರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಗುರುವಾರ ತಿಳಿಸಿದೆ. 

‘ಈ ಕಾರ್ಯಾಚರಣೆ ದೀರ್ಘಾವಧಿಯ ಯೋಜನೆಯ ಭಾಗವಷ್ಟೆ. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎನ್ನುವ ಭಾರತದ ಹೇಳಿಕೆಗೆ ಇದು ಪ್ರತಿಕ್ರಿಯೆ ಅಲ್ಲ’ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಹೇಳಿದೆ. 

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್–ಉದ್–ದಾವಾ ಹಾಗೂ ಅದರ ಉಪ ಸಂಘಟನೆ ಫಲಾ–ಎ–ಇನ್ಸಾಯತ್‌ಗೆ ಸೇರಿದ್ದ ಸ್ವತ್ತುಗಳನ್ನು ಸರ್ಕಾರ ಬುಧವಾರವಷ್ಟೆ ತನ್ನ ವಶಕ್ಕೆ ಪಡೆದಿತ್ತು. 

ಭಾರತದಲ್ಲಿ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಮಟ್ಟದಲ್ಲಿ ಒತ್ತಡ ಸೃಷ್ಟಿಯಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !