ಗಿಲ್ಗಿಟ್‌–ಬಾಲ್ಟಿಸ್ತಾನ್‌ ನಾಗರಿಕರಿಗೆ ಹೆಚ್ಚು ಹಕ್ಕು ನೀಡಿ

7
ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿದ ಸುಪ್ರೀಂಕೋರ್ಟ್‌

ಗಿಲ್ಗಿಟ್‌–ಬಾಲ್ಟಿಸ್ತಾನ್‌ ನಾಗರಿಕರಿಗೆ ಹೆಚ್ಚು ಹಕ್ಕು ನೀಡಿ

Published:
Updated:

ಇಸ್ಲಾಮಾಬಾದ್‌: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌– ಬಾಲ್ಟಿಸ್ತಾನ್‌ ಭಾಗದ ನಾಗರಿಕರಿಗೆ ಮೂಲಭೂತ ಹಕ್ಕು ಸೇರಿದಂತೆ ಹೆಚ್ಚಿನ ಹಕ್ಕು ನೀಡುವ ನಿಟ್ಟಿನಲ್ಲಿ ಹದಿನೈದು ದಿನಗಳ ಒಳಗಾಗಿ ಹೊಸ ಕಾನೂನು ರಚಿಸಬೇಕು’ ಎಂದು ಪಾಕಿಸ್ತಾನ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ಸಂವಿಧಾನಿಕ ವಿಚಾರಗಳು ಹಾಗೂ ಈ ಭಾಗದ ಸುಧಾರಣೆ ಕುರಿತಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಸಕಿಬ್‌ ನಿಸಾರ್‌ ನೇತೃತ್ವದ ವಿಭಾಗೀಯ ಪೀಠ, ವಿವರವಾದ ಆದೇಶ ಹೊರಡಿಸಿತು.

ಗಿಲ್ಗಿಟ್‌– ಬಾಲ್ಟಿಸ್ತಾನ್‌ಗೆ ಸುಪ್ರೀಂಕೋರ್ಟ್‌ನ ಅಧಿಕಾರ ಹಾಗೂ ನ್ಯಾಯಾಂಗವ್ಯಾಪ್ತಿಯು  ಗಿಲ್ಗಿಟ್‌– ಬಾಲ್ಟಿಸ್ತಾನ್‌ವರೆಗೆ ವಿಸ್ತರಿಸಿದೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

 ಗಿಲ್ಗಿಟ್‌– ಬಾಲ್ಟಿಸ್ತಾನ್‌ ಸೇರಿದಂತೆ, ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಭಾರತದ ಅವಿಭಾಜ್ಯ ಅಂಗ ಎಂದು ಭಾರತದ ವಿದೇಶಾಂಗ ಇಲಾಖೆಯೂ ಕಳೆದ ವರ್ಷವೇ ಪಾಕಿಸ್ತಾನ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು.

ಪ್ರತಿಭಟನೆ ದಾಖಲು: ಪಾಕಿಸ್ತಾನದ ಉಪ ಹೈಮಿಷನರ್‌ ಅವರಿಗೆ ಶುಕ್ರವಾರ ಸಮನ್ಸ್‌ ನೀಡಿದ ಭಾರತ,  ಸುಪ್ರೀಂಕೋರ್ಟ್‌ ಆದೇಶದ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದೆ. ಗಿಲ್ಗಿಟ್‌– ಬಾಲ್ಟಿಸ್ತಾನ್‌ ಸೇರಿದಂತೆ ಇಡೀ ಜಮ್ಮು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !