ಷರೀಫ್‌ ಜಾಮೀನು ಅರ್ಜಿ: ಮಾರ್ಚ್‌ 26ಕ್ಕೆ ಮುಂದೂಡಿಕೆ

ಗುರುವಾರ , ಏಪ್ರಿಲ್ 18, 2019
32 °C

ಷರೀಫ್‌ ಜಾಮೀನು ಅರ್ಜಿ: ಮಾರ್ಚ್‌ 26ಕ್ಕೆ ಮುಂದೂಡಿಕೆ

Published:
Updated:
Prajavani

ಇಸ್ಲಾಮಾಬಾದ್‌: ವೈದ್ಯಕೀಯ ವರದಿ ಆಧರಿಸಿ ಜಾಮೀನು ನೀಡಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸುಪ್ರೀಂಕೋರ್ಟ್‌ ಮಾರ್ಚ್‌ 26ಕ್ಕೆ ಮುಂದೂಡಿದೆ.

ಅಲ್‌–ಅಜಿಜಿಯಾ ಸ್ಟೀಲ್‌ ಮಿಲ್‌ ಪ್ರಕರಣದಲ್ಲಿ  ಜೈಲುಶಿಕ್ಷೆಗೆ ಗುರಿಯಾಗಿರುವ ಷರೀಫ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಕಳೆದ ಫೆಬ್ರುವರಿ 25ರಂದು ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ತಿರಸ್ಕೃತಗೊಂಡ ಬಳಿಕ ಮಾರ್ಚ್‌ 6ರಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಸೀಫ್‌ ಸಯೀದ್‌ ಖೊಸಾ ನೇತೃತ್ವದ ತ್ರಿಸದಸ್ಯಪೀಠ, ಈ ಕುರಿತಂತೆ ಸೂಕ್ತ ಪ್ರತ್ಯುತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎನ್‌ಎಬಿ) ಸೂಚಿಸಿದೆ. ಅಲ್ಲದೇ, ಮಾರ್ಚ್‌ 26ರಂದು ಈ ಕುರಿತ ಅರ್ಜಿ ವಿಚಾರಣೆ ನಡೆಸಿ, ಅದೇ ದಿನ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !