ಜಿಬಿ ಸಾಂವಿಧಾನಿಕ ಮಾನ್ಯತೆ:ತೀರ್ಪು ಕಾಯ್ದಿರಿಸಿದ ಕೋರ್ಟ್‌

7

ಜಿಬಿ ಸಾಂವಿಧಾನಿಕ ಮಾನ್ಯತೆ:ತೀರ್ಪು ಕಾಯ್ದಿರಿಸಿದ ಕೋರ್ಟ್‌

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದ ಆಕ್ರಮಿತ ಗಿಲ್ಗಿಟ್‌–ಬಾಲ್ಟಿಸ್ತಾನ್‌(ಜಿಬಿ) ಪ್ರದೇಶಕ್ಕೆ ಸಾಂವಿಧಾನಿಕ ಮಾನ್ಯತೆ ಮತ್ತು ನಿವಾಸಿಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಬೇಕೆಂಬ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ. 

ಮುಖ್ಯನಾಯಮೂರ್ತಿ ಸಾಕಿಬ್‌ ನಿಸಾರ್‌ ನೇತೃತ್ವದ ಏಳು ಸದಸ್ಯರ ಪೀಠ, ‘ಜಿಬಿ ಮೇಲ್ಮನವಿ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಪಾಕಿಸ್ತಾನದ ಸುಪ್ರೀಂಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ’ ಎಂದು ಹೇಳಿ, ಈ ಕುರಿತಂತೆ ಮುಂದಿನ ತೀರ್ಪನ್ನು ಕಾಯ್ದಿರಿಸಿದರು.

ಪಾಕಿಸ್ತಾನವು ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರ ಪ್ರದೇಶವನ್ನು ಆಡಳಿತಾತ್ಮಕ ದೃಷ್ಟಿಯಿಂದ ಗಿಲ್ಗಿಟ್‌–ಬಾಲ್ಟಿಸ್ತಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ ಎಂದು ವಿಭಾಗಿಸಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !