ನವಾಜ್ ಷರೀಫ್ ಮನವಿ ತಳ್ಳಿಹಾಕಿದ ಪಾಕ್ ‘ಸುಪ್ರೀಂ’

ಭಾನುವಾರ, ಮಾರ್ಚ್ 24, 2019
31 °C

ನವಾಜ್ ಷರೀಫ್ ಮನವಿ ತಳ್ಳಿಹಾಕಿದ ಪಾಕ್ ‘ಸುಪ್ರೀಂ’

Published:
Updated:

ಇಸ್ಲಾಮಾಬಾದ್: ಜಾಮೀನು ಅರ್ಜಿಯ ತ್ವರಿತ ವಿಚಾರಣೆ ನಡೆಸಬೇಕೆಂದು, ಪಾಕಿಸ್ತಾನದ ಉಚ್ಛಾಟಿತ ‍ಪ್ರಧಾನಿ ನವಾಜ್ ಷರೀಫ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ವೈದ್ಯಕೀಯ ಆಧಾರದ ಮೇಲೆ ಷರೀಫ್ ಅವರಿಗೆ ಜಾಮೀನು ನೀಡಬೇಕೆಂದು, ಅವರ ಪರ ವಕೀಲ ಖ್ವಾಜಾ ಹ್ಯಾರಿಸ್ ಅಹ್ಮದ್ ಮನವಿ ಅರ್ಜಿ ಸಲ್ಲಿಸಿದ್ದರು. 

ಜಾಮೀನು ನಿರಾಕರಿಸಿ ಇಸ್ಲಾಮಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧವಾಗಿ ಈ ಅರ್ಜಿ ಸಲ್ಲಿಸಲಾಗಿದೆ. ಆದರೆ ಸರದಿ ಬಂದಾಗ ಈ ಅರ್ಜಿ ವಿಚಾರಣೆ ನಡೆಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !