ಪಾಕಿಸ್ತಾನದಿಂದ ‘ಟ್ವಿಟರ್‌’ಗೆ ನಿಷೇಧದ ಬೆದರಿಕೆ

7

ಪಾಕಿಸ್ತಾನದಿಂದ ‘ಟ್ವಿಟರ್‌’ಗೆ ನಿಷೇಧದ ಬೆದರಿಕೆ

Published:
Updated:

ಇಸ್ಲಾಮಾಬಾದ್‌: ಆಕ್ಷೇಪಾರ್ಹ ಅಂಶಗಳನ್ನು ನಿರ್ಬಂಧಿಸಬೇಕು ಎಂಬ ತನ್ನ ಸೂಚನೆಯನ್ನು ಪಾಲಿಸದ ಟ್ವಿಟರ್‌ಗೆ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು (ಪಿಟಿಎ) ನಿಷೇಧದ ಬೆದರಿಕೆ ನೀಡಿದೆ. 

‘ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ಅಂಶಗಳಿಗೆ ಅಥವಾ ಸಂದೇಶಗಳಿಗೆ ಕಡಿವಾಣ ಹಾಕುವಂತೆ ನೂರಕ್ಕೂ ಹೆಚ್ಚು ಬಾರಿ ಮನವಿ ಮಾಡಿದರೂ, ಟ್ವಿಟರ್‌ ಆಡಳಿತ ಮಂಡಳಿ ಅದನ್ನು ಪುರಸ್ಕರಿಸದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೀಗೆಯೇ ಆದರೆ, ಪಾಕಿಸ್ತಾನದಲ್ಲಿ ಟ್ವಿಟರ್‌ ಬಳಕೆಯನ್ನು ನಿಷೇಧಿಸಬೇಕಾಗುತ್ತದೆ’ ಎಂದು ಪಿಟಿಎದ ಪ್ರಧಾನ ನಿರ್ದೇಶಕ ನಿಸಾರ್‌ ಅಹ್ಮದ್‌ ಹೇಳಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. 

ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ ಹೇರಿರುವ ಹಲವು ಉದಾಹರಣೆಗಳು ಪಾಕಿಸ್ತಾನದಲ್ಲಿವೆ. 2008 ಮತ್ತು 2010ರಲ್ಲಿ ಫೇಸ್‌ಬುಕ್‌ ಅನ್ನು ನಿಷೇಧಿಸಲಾಗಿತ್ತು. 2012ರ ಫೆಬ್ರುವರಿಯಲ್ಲಿ ಎರಡು ವರ್ಷಗಳವರೆಗೆ ಯೂಟ್ಯೂಬ್‌ಗೆ ಪಿಟಿಎ ನಿಷೇಧ ಹೇರಿತ್ತು. 

‘ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದು ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ನ ಮಾಹಿತಿ ಕಾರ್ಯದರ್ಶಿ ಫವಾದ್‌ ಚೌಧರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !