‘ಯುವಕರ ಸೆಳೆಯಲು ಉಗ್ರರಿಂದ ಹನಿಟ್ರ್ಯಾಪ್ ತಂತ್ರ’

7

‘ಯುವಕರ ಸೆಳೆಯಲು ಉಗ್ರರಿಂದ ಹನಿಟ್ರ್ಯಾಪ್ ತಂತ್ರ’

Published:
Updated:

ಶ್ರೀನಗರ: ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಉಗ್ರಗಾಮಿ ಸಂಘಟನೆಗಳು ಹನಿಟ್ರ್ಯಾಪ್ ತಂತ್ರವನ್ನು ಬಳಸುತ್ತಿವೆ  ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಶಸ್ತ್ರಾಸ್ತ್ರಗಳ ಸಾಗಾಟ, ಒಳನುಸುಳಿದ ಉಗ್ರರಿಗೆ ಸ್ಥಳೀಯವಾಗಿ ಮಾರ್ಗದರ್ಶಕರಾಗಿ ಕೆಲಸ ಮಾಡುವಂತೆ ಅವರನ್ನು ನಿಯೋಜಿಸಲಾಗುತ್ತಿದೆ. ಹದಿನೈದು ದಿನಗಳ ಹಿಂದೆ ಬಂಧಿಸಲಾದ ಸೈಯದ್ ಶಾಜಿಯಾ ಅವರ ವಿಚಾರಣೆಯಿಂದ ಮಹತ್ವದ ಅಂಶಗಳ ಬಹಿರಂಗವಾಗಿವೆ. 

ಶಾಜಿಯಾ ಅವರು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಖಾತೆಗಳನ್ನು ತೆರೆದಿದ್ದರು. ಕಾಶ್ಮೀರ ಕಣಿವೆಯ ಸಾಕಷ್ಟು ಯುವಕರು ಶಾಜಿಯಾ ಅವರ ಹಿಂಬಾಲಕರಾಗಿದ್ದರು. ಮಹಿಳೆ ಬಳಸುತ್ತಿದ್ದ ಐಪಿ ಅಡ್ರೆಸ್ (ಇಂಟರ್ನೆಟ್ ಪ್ರೊಟೊಕಾಲ್) ಮೇಲೆ ಹಲವು ತಿಂಗಳುಗಳಿಂದ ಕೇಂದ್ರೀಯ ಭದ್ರತಾ ಏಜೆನ್ಸಿಗಳು ನಿಗಾ ವಹಿಸಿದ್ದವು. ಯುವಕರ ಜೊತೆ ಮಾನತಾಡುತ್ತಿದ್ದ ಶಾಜಿಯಾ, ಸಾಮಗ್ರಿಯನ್ನು ನಿಗದಿತ ಸ್ಥಳಕ್ಕೆ ಸಾಗಿಸುವಂತೆ ಮನವೊಲಿಸುತ್ತಿದ್ದರು. ಕೆಲಸ ಪೂರ್ಣಗೊಂಡ ಬಳಿಕ ಅವರನ್ನು ಭೇಟಿ ಮಾಡುವ ವಾಗ್ದಾನ ನೀಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. 

ಪೊಲೀಸರೊಂದಿಗೂ ಸಂಪರ್ಕದಲ್ಲಿರುತ್ತಿದ್ದ ಶಾಜಿಯಾ, ಉಗ್ರರಿಗೆ ಸಂಬಂಧಿಸಿದ ಅಷ್ಟೇನೂ ಮಹತ್ವವಲ್ಲದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಪೊಲೀಸರಿಂದ ತನಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. 

ವಿಚಾರಣೆ ವೇಳೆ ಈ ಮಾಹಿತಿಯನ್ನು ಬಹಿರಂಗಪಡಿಸಿರುವ ಶಾಜಿಯಾ, ಇಂತಹ ಕೆಲಸ ಮಾಡುತ್ತಿರುವ ಮತ್ತಷ್ಟು ಮಹಿಳೆಯರು ಇದ್ದಾರೆ ಎಂದೂ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !