ಕದನವಿರಾಮ ಉಲ್ಲಂಘನೆ: ಪಾಕ್‌ನಿಂದ ದಾಳಿ

7
ಕದನವಿರಾಮ ಉಲ್ಲಂಘನೆ

ಕದನವಿರಾಮ ಉಲ್ಲಂಘನೆ: ಪಾಕ್‌ನಿಂದ ದಾಳಿ

Published:
Updated:

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ತಾನಿ ಯೋಧರು ಗುರುವಾರ ರಾತ್ರಿಯಿಂದ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

‘ಪಾಕಿಸ್ತಾನದ ಪಡೆಗಳು ಆಧುನಿಕ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿವೆ’ ಎಂದು ಸೇನಾ ಮೂಲಗಳು ತಿಳಿಸಿವೆ.

ಕದನವಿರಾಮ  ಉಲ್ಲಂಘನೆ ಮಾಡಿ ಭಾರತದ ಕಡೆಗಿನ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿದ ಪ್ರದೇಶಗಳಿಗೆ ಸೇನೆಯ ಉತ್ತರ ಕಮಾಂಡ್‌ನ ಜನರಲ್‌ ರಣಬೀರ್‌ ಸಿಂಗ್ ಭೇಟಿ ನೀಡಿದ್ದರು. ಭದ್ರತಾ ಸ್ಥಿತಿಗತಿಯ ಪರಾಮರ್ಶೆ ನಡೆಸಿದ ಅವರು, ಭಾರತದ ಯೋಧರು ಕಾರ್ಯಾಚರಣೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !