ಆರ್ಥಿಕ ಸಮಸ್ಯೆ: ಐಎಂಎಫ್‌ನಿಂದ ಹಣಕಾಸು ನೆರವು ಕೋರಿದ ಪಾಕಿಸ್ತಾನ

7

ಆರ್ಥಿಕ ಸಮಸ್ಯೆ: ಐಎಂಎಫ್‌ನಿಂದ ಹಣಕಾಸು ನೆರವು ಕೋರಿದ ಪಾಕಿಸ್ತಾನ

Published:
Updated:

ಬಾಲಿ(ಇಂಡೋನೇಷಿಯಾ): ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ(ಐಎಂಎಫ್‌) ಆರ್ಥಿಕ ನೆರವು ಕೋರಿದೆ ಎಂದು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟೀನ್ ಲಗಾರ್ಡೆ ಹೇಳಿದ್ದಾರೆ.

ಪಾಕಿಸ್ತಾನ ಹಣಕಾಸು ಸಚಿವ ಅಸಾದ್‌ ಉಮರ್‌, ಪಾಕಿಸ್ತಾನ ಸ್ಟೇಟ್‌ ಬ್ಯಾಂಕಿನ ಗೌವರ್ನರ್‌ ತಾರಿಕ್‌ ಬಜ್ವಾ ಮತ್ತು ತಂಡ ಲಗಾರ್ಡೆಯವರನ್ನು ಭೇಟಿ ಮಾಡಿ ನೆರವು ಕೋರಿದೆ. ಈ ಮಾಹಿತಿಯನ್ನು ಲಗಾರ್ಡೆಯವರೇ ಖಚಿತಪಡಿಸಿದ್ದಾರೆ.

‘ಇಂದು ಪಾಕಿಸ್ತಾನ ಹಣಕಾಸು ಸಚಿವ ಅಸಾದ್‌ ಉಮರ್‌ ಹಾಗೂ ಪಾಕಿಸ್ತಾನ ಸ್ಟೇಟ್‌ ಬ್ಯಾಂಕಿನ ಗೌವರ್ನರ್‌ ತಾರಿಕ್‌ ಬಜ್ವಾ ಮತ್ತು ತಂಡವನ್ನು ಭೇಟಿಯಾದೆ. ಮಾತುಕತೆ ನಡುವೆ ಅವರು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದರು’ ಎಂದು ತಿಳಿಸಿದ್ದಾರೆ.

‘ಮುಂಬರುವ ದಿನಗಳಲ್ಲಿ ಐಎಂಎಫ್‌ ತಂಡವು ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದ್ದು, ಸಾಧ್ಯವಿರುವ ಆರ್ಥಿಕ ನೆರವು ಕಾರ್ಯಕ್ರಮ ರೂಪಿಸುವ ಸಂಬಂಧ ಅಗತ್ಯ ಮಾತುಕತೆ ನಡೆಸಲಿದೆ. ನಾವು ನಮ್ಮ ಸಹಭಾಗಿತ್ವವನ್ನು ಮುಂದುವರಿಸುವತ್ತ ಗಮನ ನೀಡಲಿದ್ದೇವೆ’ ಎಂದರು.

ದೀರ್ಘಕಾಲದಿಂದಲೂ ಪಾಕಿಸ್ತಾನ ಆರ್ಥವ್ಯವಸ್ಥೆ ಹದಗೆಟ್ಟಿದ್ದು, ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ ಹಣಕಾಸು ನೆರವು ಕೋರಲು ನಿರ್ಧರಿಸಿತ್ತು. 2013ರಿಂದ ಈಚೆಗೆ ಐಎಂಎಫ್‌ನಿಂದ ಎರಡನೇ ಬಾರಿಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !