ಪಾಕ್‌ ಅಧ್ಯಕ್ಷರಾಗಿ ಅಲ್ವಿ ಆಯ್ಕೆ

7
ಪಾಕಿಸ್ತಾನ ತೆಹ್ರೀಕ್‌– ಎ–ಇನ್ಸಾಫ್‌ ಸಂಸ್ಥಾಪಕ

ಪಾಕ್‌ ಅಧ್ಯಕ್ಷರಾಗಿ ಅಲ್ವಿ ಆಯ್ಕೆ

Published:
Updated:
Deccan Herald

ಇಸ್ಲಾಮಾಬಾದ್‌: ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಡಾ.ಅರೀಫ್‌ ಅಲ್ವಿ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ದಂತ ವೈದ್ಯರಾಗಿರುವ 69 ವರ್ಷದ ಅಲ್ವಿ ಅವರು, ಪಾಕಿಸ್ತಾನ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೂ ಆಪ್ತರಾಗಿದ್ದಾರೆ.

ಪಾಕಿಸ್ತಾನ ಪೀಪಲ್ಸ್‌ ಪಕ್ಷದ (ಪಿಪಿಪಿ) ಅಭ್ಯರ್ಥಿ ಐತ್ಝಾಝ್‌ ಅಹ್ಸನ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್‌–ಎನ್‌ (ಪಿಎಂಎಲ್‌–ಎನ್‌) ಪಕ್ಷದ ಅಭ್ಯರ್ಥಿ ಮೌಲಾನಾ ಫಜ್ಲ್‌ ಉರ್‌ ರೆಹಮಾನ್‌ ಅವರನ್ನು ಅಲ್ವಿ ಅವರು ಸೋಲಿಸಿ 13ನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಬಲೂಚಿಸ್ತಾನ ಪ್ರಾಂತ್ಯ ಅಸೆಂಬ್ಲಿಯಲ್ಲಿ ಚಲಾವಣೆಯಾದ 60 ಮತಗಳಲ್ಲಿ 45 ಮತಗಳನ್ನು ಅಲ್ವಿ ಪಡೆದಿದ್ದಾರೆ. ಪಿಪಿಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಸಿಂಧ್‌ ಅಸೆಂಬ್ಲಿಯಲ್ಲಿ ಅಹ್ಸನ್‌ ಅವರಿಗೆ 100 ಮತ್ತು ಅಲ್ವಿ ಅವರಿಗೆ 56 ಮತಗಳು ಚಲಾವಣೆಯಾಗಿವೆ. ರೆಹಮಾನ್‌ ಪರ ಕೇವಲ ಒಂದು ಮತ ಚಲಾವಣೆಯಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !