30 ಭಾರತೀಯರನ್ನು ಬಿಡುಗಡೆಗೊಳಿಸಿದ ಪಾಕ್‌

7
ಇಂದು ಪಾಕ್‌ ಸ್ವಾತಂತ್ರ್ಯ ದಿನಾಚರಣೆ: ಸೌಹಾರ್ದ ಸಂಕೇತವಾಗಿ ಈ ಕ್ರಮ

30 ಭಾರತೀಯರನ್ನು ಬಿಡುಗಡೆಗೊಳಿಸಿದ ಪಾಕ್‌

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನ ಆಗಸ್ಟ್‌ 14 (ಇಂದು) ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಸೌಹಾರ್ದತೆಯ ಸಂಕೇತವಾಗಿ 27 ಮೀನುಗಾರರು ಸೇರಿದಂತೆ ಒಟ್ಟು 30 ಭಾರತೀಯರನ್ನು ಪಾಕಿಸ್ತಾನ ಸೋಮವಾರ ಜೈಲಿನಿಂದ ಬಿಡುಗಡೆ ಮಾಡಿದೆ. 

‘ಮಾನವೀಯ ಸಮಸ್ಯೆಗಳನ್ನು ರಾಜಕೀಯಗೊಳಿಸದಿರುವ ಪಾಕಿಸ್ತಾನದ ಸ್ಥಿರ ನೀತಿಗೆ ಅನುಗುಣವಾಗಿ ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಹೇಳಿಕೆ ನೀಡಿದ್ದಾರೆ. 

‘ಸೌಹಾರ್ದತೆಯ ಸಂಕೇತವಾಗಿ ಭಾರತೀಯರನ್ನು ಬಿಡುಗಡೆ ಗೊಳಿಸಲಾಗಿದೆ. ಭಾರತವೂ ಇದೇ ರೀತಿ ನಮ್ಮೊಂದಿಗೆ ಕೈಜೋಡಿಸಲಿದೆ ಎಂಬ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ. 

418 ಮೀನುಗಾರರು ಸೇರಿ 470ಕ್ಕಿಂತಲೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ಜುಲೈನಲ್ಲಿ ಪಾಕ್‌ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿತ್ತು. 

ಸದ್ಯ ಜೈಲಿನಿಂದ ಬಿಡುಗಡೆಗೊಂಡ ಭಾರತೀಯರನ್ನು ಕರಾಚಿಯ ಮಲಿರ್‌ ಜೈಲಿನಿಂದ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

  • 3

    Happy
  • 2

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !