ಸೋಮವಾರ, ನವೆಂಬರ್ 18, 2019
27 °C

ಭಾರತದ ಉಪ ಹೈಕಮಿಷನರ್‌ಗೆ ಸಮನ್ಸ್‌

Published:
Updated:

ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಯೋಧರು ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನವು ಭಾರತದ ಉಪ ಹೈಕಮಿಷನರ್‌ ಗೌರವ್‌ ಅಹ್ಲುವಾಲಿಯಾ ಅವರಿಗೆ ಬುಧವಾರ ಸಮನ್ಸ್‌ ನೀಡಿದೆ.

ನೆಜಾಪಿರ್‌ ವಲಯದಲ್ಲಿ ಭಾರತೀಯ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಮಹಿಳೆ ಮತ್ತು ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ. ಘಟನೆಯನ್ನು ಖಂಡಿಸಿರುವ ದಕ್ಷಿಣ ಏಷ್ಯಾ ಮತ್ತು ಸಾರ್ಕ್‌ನ ಮಹಾನಿರ್ದೇಶಕ ಮೊಹಮ್ಮದ್‌ ಫೈಸಲ್, ಗೌರವ್ ಅವರಿಗೆ ಸಮನ್ಸ್‌ ನೀಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಯೋಧರು ನಿರಂತರವಾಗಿ ನಾಗರಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಫೈಸಲ್ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)