ಕಾರಿನಲ್ಲಿ ಚುಂಬನ: ಜೋಡಿಯ ಬಂಧನ

7

ಕಾರಿನಲ್ಲಿ ಚುಂಬನ: ಜೋಡಿಯ ಬಂಧನ

Published:
Updated:

ಇಸ್ಲಾಮಾಬಾದ್‌: ಕಾರಿನಲ್ಲಿ ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿದ್ದ ಪಾಕಿಸ್ತಾನದ ಜೋಡಿಯನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಅಶ್ಲೀಲ ನಡವಳಿಕೆ ಆರೋಪದ ಮೇಲೆ 18–19 ವರ್ಷದ ಯುವಕ–ಯುವತಿಯನ್ನು ಬಂಧಿಸಲಾಗಿದ್ದು, ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನೂ ವಿಧಿಸುವ ಸಾಧ್ಯತೆ ಇದೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಇಸ್ಲಾಮಾಬಾದ್‌ ನಗರದ ವಾಣಿಜ್ಯ ಕೇಂದ್ರವೊಂದರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಈ ಜೋಡಿ ಅಶ್ಲೀಲವಾಗಿ ವರ್ತಿಸುತ್ತಿದೆ ಎಂಬ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. 

‘ಪೊಲೀಸರು ಸ್ಥಳಕ್ಕೆ ಹಾಜರಾದ ನಂತರವೂ ಈ ಜೋಡಿ ಮುದ್ದಾಟ ಮುಂದುವರಿಸಿತ್ತು’ ಎಂದು ಅವರು ತಿಳಿಸಿದ್ದಾರೆ. 

ಜೋಡಿಯನ್ನು ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !