ಗುರುವಾರ , ನವೆಂಬರ್ 21, 2019
23 °C
ಸೈಬರ್‌ಕ್ರೈಂ ಕಾನೂನಿನಡಿ ಮೊದಲ ಪ್ರಕರಣ ದಾಖಲು

ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ: ವ್ಯಕ್ತಿಗೆ ಜೈಲು

Published:
Updated:

ಲಾಹೋರ್: ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ಪೋಸ್ಟ್ ಪ್ರಕಟಿಸಿದ ಸಾಜಿದ್ ಅಲಿ ಎಂಬಾತನಿಗೆ ಪಾಕಿಸ್ತಾನ ನ್ಯಾಯಾಲಯವು ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಪಾಕಿಸ್ತಾನದಲ್ಲಿ ಸೈಬರ್ ಕ್ರೈಂ ಕಾನೂನು ಜಾರಿಗೆ ಬಂದಮೇಲೆ ವಿಚಾರಣೆಗೊಳಪಟ್ಟ ಮೊದಲ ಪ್ರಕರಣ ಇದಾಗಿದೆ. ಧರ್ಮನಿಂದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ 2016ರಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಮ್ ಅಡಿ ಕಾನೂನು ರೂಪಿಸಲಾಗಿದೆ. 2017ರಲ್ಲಿ ಸಾಜಿದ್ ಅಲಿ, ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.  

ಪ್ರತಿಕ್ರಿಯಿಸಿ (+)