ಪಾಕ್‌ನಿಂದ ಪರಿವೀಕ್ಷಣ ಉಪಗ್ರಹ ಅಭಿವೃದ್ಧಿ

7
ಈ ರೀತಿಯ ಉಪಗ್ರಹಗಳನ್ನು ಭಾರತ 1970ರಿಂದಲೇ ಉಡಾವಣೆ ಮಾಡುತ್ತಿದೆ

ಪಾಕ್‌ನಿಂದ ಪರಿವೀಕ್ಷಣ ಉಪಗ್ರಹ ಅಭಿವೃದ್ಧಿ

Published:
Updated:

ಇಸ್ಲಾಮಾಬಾದ್‌: ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಿವೀಕ್ಷಣ ಉಪಗ್ರಹವನ್ನು ಪಾಕಿಸ್ತಾನ ಮುಂದಿನ ತಿಂಗಳು ಉಡಾವಣೆ ಮಾಡಲಿದೆ. ಇದನ್ನು ಭೂಮಿಯ ಗುಣಲಕ್ಷಣ, ಖನಿಜ ಪತ್ತೆ, ಹವಾಮಾನ ಬದಲಾವಣೆ ಪರಿಣಾಮಗಳ ಅಧ್ಯಯನ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಬಹುದಾಗಿದೆ.

ಸೆನ್ಸರ್ ಮತ್ತು ಕ್ಯಾಮೆರಾಗಳನ್ನು ಒಳಗೊಂಡಿರುವ ಇದು 285 ಕೆ.ಜಿ ತೂಕವಿದೆ. ಪಾಕ್‌ಟಿಇಎಸ್–1ಎ ಎಂದು ಹೆಸರಿಸಲಾಗಿರುವ ಈ ಉಪಗ್ರಹ, ಭೂಮಿಯಿಂದ 610 ಕಿ.ಮೀ ದೂರದ ಬಾಹ್ಯಾಕಾಶದಲ್ಲಿ ಇರಲಿದೆ ಎಂದು ಡಾನ್‌ ವರದಿ ಮಾಡಿದೆ.

ಈ ದೂರಸಂವೇದಿ ಉಪಗ್ರಹ ತಂತ್ರಜ್ಞಾನದಿಂದ ನೀರ್ಗಲ್ಲುಗಳ ಕರಗುವಿಕೆಯಂತಹ ಹವಾಮಾನ ಬದಲಾವಣೆ, ಹಸಿರು ಮನೆ ಪರಿಣಾಮ, ಕಾಳ್ಗಿಚ್ಚನ್ನೂ ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ, ಕೃಷಿ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಇದು ಪರಿಹಾರ ನೀಡಬಲ್ಲದು. ಈ ಉಪಗ್ರಹದ ಪಥದರ್ಶಕ ತಂತ್ರಜ್ಞಾನವನ್ನು ಚೀನಾದಿಂದ ಪಾಕ್‌ 2012ರಲ್ಲಿ ಪಡೆದುಕೊಂಡಿತ್ತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !