ಗರುಡಾಚಾರಪಾಳ್ಯ: ಪಲ್ಲಕ್ಕಿ ಉತ್ಸವದ

ಸೋಮವಾರ, ಮೇ 27, 2019
29 °C

ಗರುಡಾಚಾರಪಾಳ್ಯ: ಪಲ್ಲಕ್ಕಿ ಉತ್ಸವದ

Published:
Updated:
Prajavani

ವೈಟ್‌ಫೀಲ್ಡ್‌: ರಾಮನವಮಿ ಪ್ರಯುಕ್ತ ಗರುಡಾಚಾರಪಾಳ್ಯದಲ್ಲಿ 25 ದೇವರುಗಳ ಪಲ್ಲಕ್ಕಿ ಉತ್ಸವ ಸಡಗರದಿಂದ ನಡೆಯಿತು.

ವಿನಾಯಕ, ಮಂಜುನಾಥ, ಆಂಜನೇಯ, ರಾಧಾ–ರುಕ್ಮಿಣಿ–ಕೃಷ್ಣ, ಮಹೇಶ್ವರಮ್ಮ, ಸಫಲಮ್ಮ ದೇವಿ ಸೇರಿದಂತೆ 25 ದೇವರುಗಳಿಗೆ ವಿವಿಧ ಹೂವು ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ತುಮಕೂರಿನ ಕರಿಬಸವೇಶ್ವರ ಮಠದಿಂದ ಬಂದಿದ್ದ ಆನೆಯ ಮೇಲೆ ಅಂಬಾರಿ ಜೋಡಿಸಿ, ಅದರಲ್ಲಿ ಮಂಜುನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಉತ್ಸವದಲ್ಲಿ ಇದ್ದ ಕೀಲುಕುದುರೆ, ಗಾರುಡಿ ಗೊಂಬೆ ಕುಣಿತ, ವೀರಗಾಸೆ, ತಮಟೆ ವಾದ್ಯ, ನಾದಸ್ವರ, ಮರಗಾಲು ಮನುಷ್ಯರ ಕಲಾತಂಡಗಳ ಪ್ರದರ್ಶನ ನೆರೆದಿದ್ದ ಜನಸಮೂಹದ ಗಮನ ಸೆಳೆಯಿತು. 

ವಸತಿ ಸಚಿವ ಎಂಟಿಬಿ ನಾಗರಾಜ್‌ ತಾಳಕ್ಕೆ ತಕ್ಕಂತೆ ನೃತ್ಯ ಮಾಡುವ ಮೂಲಕ ಜನರ ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !