‘ಸಿರ್ಸಿ ವೃತ್ತ ಮೇಲ್ಸೇತುವೆ: ಡಾಂಬರೀಕರಣ ಪೂರ್ಣಗೊಳಿಸಲು 30 ದಿನಗಳ ಗಡುವು’

7

‘ಸಿರ್ಸಿ ವೃತ್ತ ಮೇಲ್ಸೇತುವೆ: ಡಾಂಬರೀಕರಣ ಪೂರ್ಣಗೊಳಿಸಲು 30 ದಿನಗಳ ಗಡುವು’

Published:
Updated:

ಬೆಂಗಳೂರು: ಸಿರ್ಸಿ ವೃತ್ತದ ಮೇಲ್ಸೇತುವೆಯ ರಸ್ತೆಯ ಒಂದು ಪಾರ್ಶ್ವದಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು 30 ದಿನದೊಳಗೆ ಪೂರ್ಣಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕಾಮಗಾರಿ ಸಂದರ್ಭದಲ್ಲಿ ವಾಹನ ಸವಾರರಿಗೆ ಅನನುಕೂಲವಾಗುವುದು ಸಹಜ. 30 ದಿನದ ಮಟ್ಟಿಗೆ ಸವಾರರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘‌ಮೇಲ್ಸೇತುವೆ ಮೇಲೆ ರಸ್ತೆ ಗುಂಡಿ ಬೀಳುವ ಹಾಗೂ ನೀರು ನಿಲ್ಲುವ ಬಗ್ಗೆ ಆಗಾಗ ದೂರುಗಳು ಬರುತ್ತಿದ್ದವು. ರಸ್ತೆ ಗುಂಡಿ ಉಂಟಾಗುವುದನ್ನು ತಡೆಗಟ್ಟಲು ವಿನೂತನ ತಂತ್ರಜ್ಞಾನ ಬಳಸುತ್ತಿದ್ದೇವೆ. ‘ಆಸ್‌ ಫಾಲ್ಟಿಕೋ ಸೀಲ್‌’ನ ಶೀಟ್‌ ಅನ್ನು 140 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಬಿಸಿಗೊಳಿಸಿ ರಸ್ತೆಗೆ ಅಳವಡಿಸಲಾಗುತ್ತದೆ. ಬಳಿಕ ಅದರ ಮೇಲೆ ಡಾಂಬರು ಹಾಕಲಾಗುತ್ತದೆ. ಈ ತಂತ್ರಜ್ಞಾನವನ್ನು ಕೇವಲ ಮೇಲ್ಸೇತುವೆಯ ರಸ್ತೆಗಳಿಗೆ ಮಾತ್ರ ಬಳಸಲು ಸಾಧ್ಯ’ ಎಂದು ವಿವರಿಸಿದರು.

‘ವಿಧಾನಸೌಧದಲ್ಲಿ ಹಣ ದೊರೆತ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ‌ ಎಂಬುದಾಗಿ ಸಚಿವ ಪುಟ್ಟರಂಗ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥನ ವಿರುದ್ಧ ಕಾನೂನು ಪ್ರಕಾರ ಕ್ರಮ‌ಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ತಪ್ಪಿತಸ್ಥರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಕಿ ಅಂಶ

2.5 ಕಿ.ಮೀ -ಮೇಲ್ಸೇತುವೆ ಕಾಮಗಾರಿಯ ಉದ್ದ

₹ 4.5 ಕೋಟಿ -ಕಾಮಗಾರಿಯ ಅಂದಾಜು ವೆಚ್ಚ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !