ಕೆಲ ಹೊತ್ತು ವಿದ್ಯಾರ್ಥಿಯಾದ ಉಪಮುಖ್ಯಮಂತ್ರಿ

7
ಬೆಂಚಿನಲ್ಲಿ ಕುಳಿತರು, ಪಾಠ ಮಾಡಿದರು

ಕೆಲ ಹೊತ್ತು ವಿದ್ಯಾರ್ಥಿಯಾದ ಉಪಮುಖ್ಯಮಂತ್ರಿ

Published:
Updated:
Deccan Herald

ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೆಲ ಹೊತ್ತು ವಿದ್ಯಾರ್ಥಿಯಾದರು, ಶಿಕ್ಷಕರಾದರು.

ಪೊಲೀಸ್‌ ಪಬ್ಲಿಕ್‌ ಶಾಲೆಯ ಡಾ.ಎಸ್‌.ರಾಧಾಕೃಷ್ಣನ್‌ ಬ್ಲಾಕ್‌ ಉದ್ಘಾಟಿಸಿದ ಬಳಿಕ, ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಮಕ್ಕಳೊಂದಿಗೆ ಬೆಂಚಿನಲ್ಲಿ ಕುಳಿತು ಸ್ನೇಹಿತರಂತೆ ಅವರ ಕುಶಲೋಪರಿ ವಿಚಾರಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಯುತ್ತಿದ್ದಲ್ಲಿಗೆ ಬಂದ ಅವರು ಬ್ಲಾಕ್ ಬೋರ್ಡ್‌ನಲ್ಲಿ ‘ಎಲ್ಲರಿಗೂ ಬೆಳಗಿನ ಶುಭೋದಯ’ ಎಂದೂ ಬರೆದರು. ಮಕ್ಕಳಿಗೆ ಬೋಧನೆ ಮಾಡಿದರು. ಬಳಿಕ, ‘ಹೇಗೆಲ್ಲಾ ಓದ್ತಿದ್ದೀರಾ. ಎಲ್ಲರೂ, ಚೆನ್ನಾಗಿ ಓದಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಜಾಸ್ತಿ ಮಾರ್ಕ್ಸ್‌ ತಗೋಬೇಕು’ ಎಂದು ‘ಆಲ್‌ ದಿ ಬೆಸ್ಟ್‌’ ಹೇಳಿದರು.

ಓದಿ ಮುಂದೇನಾಗಬೇಕು ಎಂದು ಉಪಮುಖ್ಯಮಂತ್ರಿ ಪ್ರಶ್ನಿಸಿದಾಗ, ಐಪಿಎಸ್‌, ಐಎಎಸ್‌, ವಿಜ್ಞಾನಿ ಆಗುವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, ನಾನು ಸೈನಿಕನಾಗುತ್ತೇನೆ. ನಾನು ಡಾಕ್ಟರ್‌ ಆಗ್ತೀನಿ ಸರ್‌ ಎಂದರು.

ವಿದ್ಯಾರ್ಥಿಗಳ ಬಳಿಗೆ ತೆರಳಿ ಪ್ರೀತಿಯಿಂದಲೇ ನಗುತ್ತಾ ಆತ್ಮೀಯತೆಯಿಂದ ಬೆರೆತರು. ಇದೆಲ್ಲವೂ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಾಗಿತ್ತು. ಈ ಸಂದರ್ಭ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಬಳಿಕ ಮಾತನಾಡಿದ ಪರಮೇಶ್ವರ, ‘ಶಿಕ್ಷಣ ಮನುಷ್ಯನ ರೂಪ, ಗುಣ ಮತ್ತು ಭವಿಷ್ಯ ರೂಪಿಸುತ್ತದೆ. ಜೀವನದಲ್ಲಿ ಸವಾಲುಗಳನ್ನು  ಧೈರ್ಯದಿಂದ ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !