ಊಟದ ವಿಚಾರ: ಕೈದಿಗಳ ಹೊಡೆದಾಟ

7
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಘಟನೆ

ಊಟದ ವಿಚಾರ: ಕೈದಿಗಳ ಹೊಡೆದಾಟ

Published:
Updated:
Prajavani

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಊಟದ ವಿಚಾರವಾಗಿ ಕೈದಿಗಳಿಬ್ಬರು ಹೊಡೆದಾಡಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿರುವ ಕೈದಿ ಕಾಮಣ್ಣ ಅಲಿಯಾಸ್‌ ರವಿಕುಮಾರ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಎಂ.ಸೋಮಶೇಖರ್, ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೈದಿ ಚೌಡಪ್ಪ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಆಗಿದ್ದೇನು: ಕಾಮಣ್ಣ ಹಾಗೂ ಚೌಡಪ್ಪನನ್ನು ಜೈಲಿನ ಟವರ್‌–2ರ ‘ಬಿ’ ಬ್ಯಾರಕ್‌ನ ಮೂರನೇ ಕೊಠಡಿಯಲ್ಲಿ ಒಟ್ಟಿಗೆ ಇರಿಸಲಾಗಿದೆ. ಜ. 21ರಂದು ಬೆಳಿಗ್ಗೆ 11.30ಕ್ಕೆ ಕೈದಿಗಳಿಗೆ ಊಟ ವಿತರಿಸಲಾಗುತ್ತಿತ್ತು. ಅದೇ ವೇಳೆಯಲ್ಲಿ ಊಟದ ವಿಚಾರವಾಗಿ ಚೌಡಪ್ಪ ಹಾಗೂ ಕಾಮಣ್ಣನ ನಡುವೆ ಜಗಳ ಶುರುವಾಗಿತ್ತು. ಕೊಠಡಿಯಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಕಾಮಣ್ಣ, ಚೌಡಪ್ಪನ ಮೇಲೆ ಹಲ್ಲೆ ಮಾಡಿದ್ದ. ಅದರಿಂದ ರಕ್ತ ಬರಲಾರಂಭಿಸಿತ್ತು. ಕೂಡಲೇ ಕೊಠಡಿಯೊಳಗೆ ಹೋದ ಜೈಲಿನ ಸಿಬ್ಬಂದಿ, ಜಗಳ ಬಿಡಿಸಿದರು. ಚೌಡಪ್ಪನನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿದರು ಎಂದು ಗೊತ್ತಾಗಿದೆ.

‘ಗಾಯಗೊಂಡಿರುವ ಕಾಮಣ್ಣನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನ ಮೇಲೆ ಹಲ್ಲೆ ಮಾಡಿರುವ ಚೌಡಪ್ಪನ ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದು ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರವೆಸಗಿದ್ದ ಕಾಮಣ್ಣ: ಬನಶಂಕರಿ 3ನೇ ಹಂತದ ಮಂಜುನಾಥ ಕಾಲೊನಿ ನಿವಾಸಿಯಾದ ಕಾಮಣ್ಣ, ಆಟೊ ಚಾಲಕನಾಗಿದ್ದ. 17 ವರ್ಷದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆತನಿಗೆ ನಗರದ 54ನೇ ಸಿಸಿಎಚ್ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !