‘ಪಾರ್ಶ್ವ ಸಂಗೀತ’ ನಾಟಕ ಪ್ರದರ್ಶನ

7
ಮುನ್ನೋಟ

‘ಪಾರ್ಶ್ವ ಸಂಗೀತ’ ನಾಟಕ ಪ್ರದರ್ಶನ

Published:
Updated:
Prajavani

‘ರಂಗವಲ್ಲಿ ಮೈಸೂರು’ ಪ್ರಸ್ತುತಿಪಡಿಸುವ ‘ಪಾರ್ಶ್ವ ಸಂಗೀತ’ ನಾಟಕ ಜನವರಿ 19ರಂದು ನಗರದಲ್ಲಿ ಪ್ರದರ್ಶನಗೊಳ್ಳಲಿದೆ. 

ಶ್ರೀನಿವಾಸ ವೈದ್ಯರ ಬರಹವನ್ನು ಈ ನಾಟಕ ಆಧರಿಸಿದೆ. ಬಿ.ಪಿ. ಅರುಣ್‌ ರಂಗರೂಪ ನೀಡಿದ್ದಾರೆ. ಪ್ರಶಾಂತ್‌ ಹಿರೇಮಠ್‌ ಅವರ ಪರಿಕಲ್ಪನೆ ಹಾಗೂ ನಿರ್ದೇಶನ ಇದೆ. ಶನಿವಾರ ಮಧ್ಯಾಹ್ನ 3.30 ಮತ್ತು 7.30ಕ್ಕೆ ಎರಡು ಪ್ರದರ್ಶನ ಇದೆ. ಜೆ.ಪಿ.ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳುವ ನಾಟಕಕ್ಕೆ ₹ 150 ಬೆಲೆ ನಿಗದಿಪಡಿಸಲಾಗಿದೆ. ಬುಕ್‌ ಮೈ ಶೋರೂಮ್‌ನಲ್ಲಿಯೂ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು.  

ಈ ನಾಟಕ 1940ರ ದಶಕದಿಂದ 70ರ ದಶಕಗಳವರೆಗಿನ ಅದ್ಭುತ ಹಾಡುಗಳು, ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಇದು ತೆರೆದಿಡುತ್ತದೆ. ಅಂದಿನ ಕಾಲದ ಹಿಂದಿ ಗಾನಲೋಕದಲ್ಲಿ ದಂತಕತೆಗಳೆನಿಸಿದ ಕೆ.ಎಲ್. ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್‌ ಕುಮಾರ್‌,  ಷಂಷಾದ್‌‌ ಬೇಗಂ, ಲತಾ ಮಂಗೇಶ್ಕರ್‌, ಮನ್ನಾ ಡೇ ಮುಂತಾದವರ ಸುಶ್ರಾವ್ಯ ಕಂಠ ನಮ್ಮಲ್ಲಿ ಭಾವತರಂಗಗಳನನ್ನು ಎಬ್ಬಿಸುವ ಪರಿಯನ್ನು ಈ ನಾಟಕದ ಮೂಲಕ ಕಟ್ಟಿಕೊಡಲಾಗಿದೆ.

ನಿರೂಪಕ ತನ್ನ ಬಾಲ್ಯದ ಅನುಭವದ ಮೂಲಕ ಆ ಕಾಲದ ಹಿಂದಿ ಚಿತ್ರ ಸಂಗೀತದ ಸುವರ್ಣ ಯುಗವನ್ನು ನೆನಪಿಸಿಕೊಳ್ಳುತ್ತಾನೆ. ಅಪ್ರತಿಮ ಚಿತ್ರಪ್ರೇಮಿಯಾದ ತನ್ನ ಚಿಕ್ಕಪ್ಪನ ಜೀವನಗಾಥೆಯನ್ನು ಪ್ರೇಕ್ಷಕರೆದುರು ಹರವಿಡುತ್ತಾನೆ. ಸುಮಾರು 25ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿರುವ ಈ ನಾಟಕದ ಸಂಗೀತ ನಿರ್ವಹಣೆಯನ್ನು ವಿಶ್ವಾಸ್‍ಕೃಷ್ಣ ಮಾಡಿದ್ದಾರೆ. ರಂಗವಿನ್ಯಾಸ ಎಚ್.ಕೆ. ದ್ವಾರಕಾನಾಥ್ ಅವರದ್ದು.  ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್ ಉಪಮನ್ಯು, ರಂಗ ನಿರ್ವಹಣೆ-ಬಿ. ಸೀಮಂತಿನಿ,  ಸಹ-ನಿರ್ದೇಶನವನ್ನು ಮಹೇಶ್‍ಕುಮಾರ್‌ ನಿರ್ವಹಿಸಲಿದ್ದಾರೆ. 

ಎ.ಕೆ. ರಾಮಾನುಜನ್ ಅವರ ‘ಅಣ್ಣಯ್ಯನ ಮಾನವಶಾಸ್ತ್ರ’, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’, ಜಾನ್ ಸ್ಟಿಯೆನ್‍ಬೆಕ್‍ನ ‘ಆಫ್ ಮೈಸ್ ಅಂಡ್ ಮೆನ್’ ಆಧಾರಿತ ‘ಇಂವ ಇಲೀನಾ ಮನುಷ್ಯನಾ’, ಪಿ.ಲಂಕೇಶರ ‘ಪೊಲೀಸರಿದ್ದಾರೆ ಎಚ್ಚರಿಕೆ’, ಜಯಂತ್ ಕಾಯ್ಕಿಣಿ ಕತೆ ಆಧಾರಿತ ‘ಮಿಥುನ್ ನಂಬರ್ ಟೂ’ ನಾಟಕಗಳು ಈವರೆಗೆ ಯಶಸ್ವಿಯಾಗಿ ಮರುಪ್ರದರ್ಶನಗೊಂಡಿವೆ.

ಪ್ರಸನ್ನ ಅವರು ಗಾಂಧಿಯ ‘ಹಿಂದ್ ಸ್ವರಾಜ್’  ಕೃತಿ ಆಧಾರಿತ ‘ಸ್ವರಾಜ್ಯದಾಟ’ ಎಂಬ ನಾಟಕವನ್ನು ರಚಿಸಿ ನಿರ್ದೇಶೀಸಿದ್ದಾರೆ. ನಾಟಕ ಪ್ರದರ್ಶನಗಳ ಜೊತೆಗೆ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ, ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ, ವೈಜ್ಞಾನಿಕ, ವೈಚಾರಿಕ ಗೋಷ್ಠಿಗಳ ಜೊತೆಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾಟಕಗಳ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ರಂಗಭೂಮಿಯೆಡೆಗೆ ಕರೆತರುವ ಪ್ರಯತ್ನವನ್ನು ಈ ತಂಡ ಮಾಡಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !