ಪಶುಪತಿನಾಥ ದೇಗುಲದ ಆಸ್ತಿ ಮಾಹಿತಿ ಬಹಿರಂಗ

ಶುಕ್ರವಾರ, ಜೂನ್ 21, 2019
23 °C

ಪಶುಪತಿನಾಥ ದೇಗುಲದ ಆಸ್ತಿ ಮಾಹಿತಿ ಬಹಿರಂಗ

Published:
Updated:
Prajavani

ಕಠ್ಮಂಡು (ಪಿಟಿಐ): ಪಶುಪತಿನಾಥ ದೇಗುಲದ ಸೇರಿದ ಆಸ್ತಿಯ ವಿವರಗಳನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಗಿದೆ.

1962ರಿಂದ 2018ರವರೆಗೆ 56 ವರ್ಷಗಳ ಅವಧಿಯಲ್ಲಿ ದೇವಸ್ಥಾನ ಹೊಂದಿರುವ ಚಿನ್ನ, ಬೆಳ್ಳಿ ಮತ್ತು ಆದಾಯದ ಮಾಹಿತಿಗಾಗಿ ಸಮಿತಿ ರಚಿಸಲಾಗಿತ್ತು.   

ದೇವಸ್ಥಾನದ ಸುಪರ್ದಿಯಲ್ಲಿ 9.27 ಕೆ.ಜಿ ಬಂಗಾರ, 316 ಕೆಜಿ ಬೆಳ್ಳಿ ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 120 ಕೋಟಿ ನಗದು ಇರಿಸಲಾಗಿದೆ.  3,66 ಹೆಕ್ಟೇರ್‌ ಭೂ ಪ್ರದೇಶವಿದೆ ಎಂದು ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್‌ ಉಪ್ರೇತಿ ತಿಳಿಸಿದ್ದಾರೆ. 

ಈ ದೇವಸ್ಥಾನ ಐದನೇ ಶತಮಾನಕ್ಕೆ ಸೇರಿದ್ದಾಗಿದ್ದು, ದೇವಸ್ಥಾನದ ಆಸ್ತಿಯ ಅಧ್ಯಯನಕ್ಕಾಗಿ 2017ರಲ್ಲಿ ಸರ್ಕಾರ ಹನ್ನೊಂದು ಮಂದಿಯ ಸಮಿತಿ ರಚಿಸಿತ್ತು. ಹಲವು ಪ್ರದೇಶಗಳಲ್ಲಿ ದೇವಸ್ಥಾನಕ್ಕೆ ಸೇರಿದ ಆಸ್ತಿಗಳಿವೆ. ಆದರೆ ಸರಿಯಾದ ದಾಖಲೆಗಳಿಲ್ಲದ ಕಾರಣ ಅವುಗಳನ್ನು ಟ್ರಸ್ಟ್‌ ಅಡಿಯಲ್ಲಿ ಸೇರಿಸಿಲ್ಲ ಎಂದು ಸಮಿತಿ ತಿಳಿಸಿದೆ.  ಟ್ರಸ್ಟ್‌ಗೆ ಸೇರಿದ ಭೂಮಿಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗಾಲ್ಫ್‌ ಕೋರ್ಸ್‌, ಫೈವ್‌ ಸ್ಟಾರ್‌ ಹೋಟೆಲ್‌ಗೆ ಗುತ್ತಿಗೆ ನೀಡಲಾಗಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !