ಬುಧವಾರ, ನವೆಂಬರ್ 13, 2019
28 °C
* ಅಮೆರಿಕ ಎಕ್ಸ್‌ಪ್ರೆಸ್ ಬ್ಯಾಂಕ್‌ ಸರ್ವರ್‌ ಹ್ಯಾಕ್‌ * ಸೈಬರ್‌ ಠಾಣೆಯಲ್ಲಿ ಎಫ್‌ಐಆರ್‌

‘ರೆಜೋರ್‌ಪೇ’ ಖಾತೆ ಬಳಸಿ ₹ 3.61 ಕೋಟಿ ಕನ್ನ

Published:
Updated:

ಬೆಂಗಳೂರು: ಅಮೆರಿಕ ಎಕ್ಸ್‌ಪ್ರೆಸ್ ಬ್ಯಾಂಕ್‌ನ ಸರ್ವರ್‌ ಹ್ಯಾಕ್ ಮಾಡಿರುವ ಖದೀಮರು, ‘ರೆಜೋರ್‌ಪೇ’ ಗ್ರಾಹಕರ ಖಾತೆಗಳನ್ನು ಬಳಸಿಕೊಂಡು ₹ 3.61 ಕೋಟಿ ನಗದು ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರೆಜೋರ್‌ಪೇ’ ಕಂಪನಿಯ ಪ್ರತಿನಿಧಿ ಮಂಜುನಾಥ್ ಎಂಬುವರು ದೂರು ನೀಡಿದ್ದಾರೆ. ವಂಚನೆ (ಐಪಿಸಿ 420) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

‘ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ‘ರೆಜೋರ್‌ಪೇ’ ಕಂಪನಿಯು ಜಾಲತಾಣ ಹಾಗೂ ಆ್ಯಪ್‌ ಮೂಲಕ ನಗದು ವರ್ಗಾವಣೆ ಸೌಲಭ್ಯ ಕಲ್ಪಿಸುತ್ತಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರು ವೈಯಕ್ತಿಕ ಖಾತೆಗಳನ್ನು ತೆರೆದು ವಹಿವಾಟು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಇತ್ತೀಚೆಗೆ ಅಮೆರಿಕ ಎಕ್ಸ್‌ಪ್ರೆಸ್ ಬ್ಯಾಂಕ್‌ನ ಸರ್ವರ್‌ ಹ್ಯಾಕ್ ಮಾಡಿರುವ ಅಪರಿಚಿತರು, ಬ್ಯಾಂಕ್‌ಗೆ ಸೇರಿದ್ದ ₹ 3.61 ಕೋಟಿ ನಗದನ್ನು ‘ರೆಜೋರ್‌ಪೇ’ ಜಾಲತಾಣದ 7,552 ವ್ಯಾಪಾರಿಗಳ ಖಾತೆಗಳ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ನಂತರವೂ ಬೇರೆ ಬೇರೆ ಖಾತೆಗಳ ಮೂಲಕ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಕಂಪನಿಯ ಪ್ರತಿನಿಧಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್‌ಗಳು ಈ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಅಧಿಕಾರಿ ಹೇಳಿದರು.

ಪ್ರತಿಕ್ರಿಯಿಸಿ (+)