‘ಯುವ ವಿಜ್ಞಾನಿ’ಗಳ ಬಳಿ ಎಲ್ಲಕ್ಕೂ ಇತ್ತು ಪರಿಹಾರ!

7
ಪಿಇಎಸ್‌ ವಿಶ್ವವಿದ್ಯಾಲಯದ ‘ಹವ್ಯಾಸಿ ಯುವ ವಿಜ್ಞಾನಿ –2018’ ಕಾರ್ಯಕ್ರಮ

‘ಯುವ ವಿಜ್ಞಾನಿ’ಗಳ ಬಳಿ ಎಲ್ಲಕ್ಕೂ ಇತ್ತು ಪರಿಹಾರ!

Published:
Updated:
Deccan Herald

ಬೆಂಗಳೂರು: ಮನುಷ್ಯ ಸೃಷ್ಟಿಸಿರುವ ಪ್ರತಿಯೊಂದು ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ ಎನ್ನುವುದನ್ನು ಇಲ್ಲಿಗೆ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಪ್ರಯೋಗಗಳ ಮೂಲಕ ನಿರೂಪಿಸುತ್ತಿದ್ದರು.

ಪಿಇಎಸ್‌ ವಿಶ್ವವಿದ್ಯಾಲಯ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಹವ್ಯಾಸಿ ಯುವವಿಜ್ಞಾನಿ –2018’ ಕಾರ್ಯಕ್ರಮದಲ್ಲಿ ದೇಶದ 22 ನಗರಗಳ ಪ್ರೌಢಶಾಲೆ ಮತ್ತು ಪಿಯು ಓದುತ್ತಿರುವ ಸುಮಾರು 8 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಗರದ ಜನ ಪ್ರತಿದಿನವೂ ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರಿಕರಿಸಿಕೊಂಡೇ ಈ ಯುವ ಮನಸ್ಸುಗಳು ತಮ್ಮ ವಿಜ್ಞಾನ ಮಾದರಿಗಳಲ್ಲಿ ನಿರೂಪಿಸಿದ್ದರು. ಬಹಳ ಸುಲಭವಾಗಿ ಕೈಗೆಟುಕುವ ದರದಲ್ಲಿ ಸಮಸ್ಯೆಗೆ ಪರಿಹಾರವಿದೆ ಎನ್ನುವುದನ್ನು ಈ ಮಾದರಿಗಳು ಸಾರಿ ಹೇಳುತ್ತಿದ್ದವು.

ವಿಜ್ಞಾನ ಯೋಜನೆಗಳ ಸ್ಪರ್ಧೆ, ಮಾದರಿ ರೂಪಿಸುವ ಸ್ಪರ್ಧೆ, ಹೊಸ ಆಲೋಚನೆ ಜಾಥ, ಕೋಡ್‌ ವಾರ್‌ ಸೇರಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳಿದ್ದವು. ಕೃಷಿ, ಬ್ಯಾಹ್ಯಾಕಾಶ, ವಿದ್ಯುತ್ ಪ್ರಸರಣದಲ್ಲಿನ ಸಮಸ್ಯೆಗಳಿಗೂ ಇಲ್ಲಿ ಪರಿಹಾರವಿತ್ತು.

ತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹ, ರೊಬೊಟಿಕ್, ನೀರು ಶುದ್ಧೀಕರಣ, ಸಮುದ್ರದಿಂದ ತೈಲವನ್ನು ಹೊರತೆಗೆಯುವುದು, ಚತುರ ಕನ್ನಡಿ ಮತ್ತು ಸ್ವಯಂ ನೀರಾವರಿ ವ್ಯವಸ್ಥೆಗಳ ಕುರಿತ ಮಾದರಿಗಳು ಇದ್ದವು.

‘ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಯೋಗ ಮಾದರಿಯನ್ನು ನೋಡಿದಾಗ, ಭವಿಷ್ಯದಲ್ಲಿ ಸಂಶೋಧನಾ ಜಗತ್ತು ಸಮೃದ್ಧವಾಗಿರುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ. ಸರ್ಕಾರ ಕೋಟಿಗಟ್ಟಲೆ ವ್ಯಯಿಸಿ ಪರಿಹಾರಕ್ಕೆ ಪರದಾಡುತ್ತಿರುವ ಸಮಸ್ಯೆಗಳನ್ನೂ ಸುಲಭವಾಗಿ ಪರಿಹರಿಸಬಹುದು ಎನ್ನುವುದನ್ನು ವಿದ್ಯಾರ್ಥಿಗಳು ಅನ್ವೇಷಿಸಿದ್ದಾರೆ’ ಎಂದು ವೀಕ್ಷಕಿ ಶ್ವೇತಾ ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಬೇಕು ಮತ್ತು ಅವರ ಅನ್ವೇಷಣೆಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !