ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು–ಹದ್ದಿನ ಸಮರ

ಚೆನ್ನೈ ಹೊರವಲಯದ ಹುಲ್ಲುಗಾವಲೊಂದರಲ್ಲಿ ಇತ್ತೀಚೆಗೆ ಕಂಡುಬಂದ ದೃಶ್ಯವಿದು. ಆ ಹುಲ್ಲುಗಾವಲು ಅಕ್ಷರಶಃ ರಣಾಂಗಣವಾಗಿ ಪರಿವರ್ತನೆಗೊಂಡಿತ್ತು. ಬೃಹತ್ ಗಾತ್ರದ ಹದ್ದು ಮತ್ತು ಆರು ಅಡಿ ಉದ್ದದ ನಾಗರ ಹಾವುಗಳ ನಡುವಣ ಸಮರ ತಾರಕಕ್ಕೇರಿತ್ತು. ನಾಗರನ ವಿಷ ಕಡಿತದಿಂದ ತಪ್ಪಿಸಿಕೊಳ್ಳಲು ರೆಕ್ಕೆಗಳನ್ನೇ ಗುರಾಣಿಯನ್ನಾಗಿ ಬಳಸಿದ ಹದ್ದು ಕೊನೆಗೆ ಹಾವಿನ ಕತ್ತನ್ನು ತಿರುಚಿ, ಮಣಿಸಿ ಆಹಾರವನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ಸು ಸಾಧಿಸಿತ್ತು. ನೋಡನೋಡುತ್ತಿದ್ದಂತೆಯೇ ಅರ್ಧ ಗಂಟೆ ಅವಧಿಯಲ್ಲಿ ಆರು ಅಡಿ ಉದ್ದದ ವಿಷಕಾರಿ ಸರ್ಪವನ್ನು ತನ್ನೊಡಲಲ್ಲಿ ಸೇರಿಸಿಕೊಂಡುಬಿಟ್ಟಿತ್ತು!ಹದ್ದುಗಳು ವಿಷಕಾರಿಯಲ್ಲದ ಕೇರೆ ಹಾವುಗಳನ್ನು ಬೇಟೆಯಾಡಿ ತಿನ್ನುವುದು ಸಾಮಾನ್ಯ. ಆದರೆ, ಘೋರ ವಿಷದಿಂದ ಕೂಡಿದ ನಾಗರ ಹಾವನ್ನು ಇಡಿಯಾಗಿ ತಿಂದಿರುವ ಅಪರೂಪದ ಪ್ರಕರಣವಿದು.ಚಿತ್ರ: ದಿನೇಶ್ ಬಾಲಕೃಷ್ಣನ್ ಮತ್ತು ಗಣೇಶ್ ಬಾಲಕೃಷ್ಣನ್
Last Updated 18 ಸೆಪ್ಟೆಂಬರ್ 2019, 8:23 IST
ಅಕ್ಷರ ಗಾತ್ರ
‘ತಂಟೆಗ್ ಬಂದ್ರೆ ಸುಮ್ನಿರಲ್ಲ ನೋಡು...’
‘ತಂಟೆಗ್ ಬಂದ್ರೆ ಸುಮ್ನಿರಲ್ಲ ನೋಡು...’
‘ತಂಟೆಗ್ ಬಂದ್ರೆ ಸುಮ್ನಿರಲ್ಲ ನೋಡು...’
ADVERTISEMENT
‘ಅದೇನ್ ಮಾಡ್ತೀಯಾ ಮಾಡ್ಕೊ ನೋಡೇ ಬಿಡ್ತೀನಿ’
‘ಅದೇನ್ ಮಾಡ್ತೀಯಾ ಮಾಡ್ಕೊ ನೋಡೇ ಬಿಡ್ತೀನಿ’
‘ಅದೇನ್ ಮಾಡ್ತೀಯಾ ಮಾಡ್ಕೊ ನೋಡೇ ಬಿಡ್ತೀನಿ’
ಗುಳುಂ, ಗುಳುಂ...
ಗುಳುಂ, ಗುಳುಂ...
ಗುಳುಂ, ಗುಳುಂ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT